ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತಪದಿ ತುಳಿದ ಅಂಧ ಯುವತಿ– ಯುವಕ

Last Updated 27 ಜೂನ್ 2019, 16:14 IST
ಅಕ್ಷರ ಗಾತ್ರ

ದೇವನಹಳ್ಳಿ: ಅಂಧ ಯುವತಿ ಭವಾನಿ ಮತ್ತು ಭಾಗಶಃ ಅಂಧತ್ವ ಇರುವ ಯುವಕ ನಾಗಣ್ಣ ವಿವಾಹ ಸಮಾರಂಭವನ್ನು ಆಚಾರ್ಯ ಶ್ರೀ ರಾಕುಂ ಆಶ್ರಮ ದೇವನಹಳ್ಳಿ ತಾಲ್ಲೂಕಿನ ರಾಕುಂ ಅಂಧರ ಶಾಲೆಯಲ್ಲಿ ಅದ್ದೂರಿಯಾಗಿ ಜರುಗಿತು.

ಮದುವೆ ಸಮಾರಂಭದಲ್ಲಿ ಶಾಲೆಯ ಸಂಸ್ಥಾಪಕ ಆಚಾರ್ಯ ರಾಕುಂಜಿ, ನಿವೃತ್ತ ಐ.ಎ.ಎಸ್.ಅಧಿಕಾರಿ ಜೆ. ಅಲೆಕ್ಸಾಂಡರ್, ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.

ರಾಕುಂಜಿ ಮಾತನಾಡಿ, ‘ನಮ್ಮ ಶಾಲೆ ಎರಡು ದಶಕಗಳಿಂದ ಅಂಧರಿಗೆ ಶಿಕ್ಷಣ ನೀಡುತ್ತಿದೆ. ಉಚಿತವಾಗಿ ವಸತಿ ನೀಡಿ ಅವರನ್ನು ಸಮಾಜದಲ್ಲಿ ಎಲ್ಲರಂತೆ ಬಾಳಬೇಕು ಎಂದು ಆತ್ಮಸ್ಥೈರ್ಯ ತುಂಬಾಲಾಗಿದೆ’ ಎಂದರು.

ಭವಾನಿ ಮತ್ತು ನಾಗಣ್ಣರವರಿಗೆ ಶಾಲೆಯಲ್ಲಿ ಉದ್ಯೋಗ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಂಧರ ವಿವಾಹ ವೇದಿಕೆ ಆರಂಭಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT