ವಿಜೃಂಭಣೆಯಿಂದ ನಡೆದ ಬ್ರಹ್ಮರಥೋತ್ಸವ

ಗುರುವಾರ , ಏಪ್ರಿಲ್ 25, 2019
29 °C

ವಿಜೃಂಭಣೆಯಿಂದ ನಡೆದ ಬ್ರಹ್ಮರಥೋತ್ಸವ

Published:
Updated:
Prajavani

ದೊಡ್ಡಬಳ್ಳಾಪುರ: ನಗರದ ಅರ್ಕಾವತಿ ಬಡಾವಣೆಯಲ್ಲಿರುವ ಶ್ರೀಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಸಂಭ್ರಮದಿಂದ ನೆರವೇರಿತು. ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರರು ಭಕ್ತಾದಿಗಳು ರಥಕ್ಕೆ ಹಣ್ಣು ದವನ ಸಮರ್ಪಿಸಿ, ದೇವರ ದರ್ಶನ ಪಡೆದರು.

ಬ್ರಹ್ಮರಥೋತ್ಸವದ ಅಂಗವಾಗಿ ತಿರುಕಲ್ಯಾಣೋತ್ಸವ, ಚತುಸ್ಥ್ಸಾನಾರ್ಚನೆ, ಪೂರ್ಣಾಹುತಿ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಮಾರ್ಚ್‌ 22ರಂದು ಸಂಜೆ 5.30ಕ್ಕೆ ಪುಷ್ಪಯಾಗಂ, ಶಯನೋತ್ಸವ, ತೀರ್ಥಗೋಷ್ಠಿ ಮೊದಲಾದ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.

ಕದರಿ ಹುಣ್ಣಿಮೆ ವಿಶೇಷ: ಹುಣ್ಣಿಮೆ ಪ್ರಯುಕ್ತ ನಗರದ ವಡ್ಡರಪೇಟೆಯಲ್ಲಿ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಹಾಸುದರ್ಶನ ಹೋಮ, ಶಾಂತಿ ಹೋಮ, ವೇದ, ಸ್ತೋತ್ರ, ಪ್ರಬಂಧ ಪಾರಾಯಣ ಸಹಸ್ರನಾಮ, ತುಳಸಿ ಅರ್ಚನೆ ಸೇವೆ, ಲಕ್ಷ್ಮೀ ನರಸಿಂಹಸ್ವಾಮಿ ಕಲ್ಯಾಣೋತ್ಸವ ನಡೆಯಿತು.

ನಗರದ ಕುಚ್ಚಪ್ಪನಪೇಟೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಕದರಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !