‘ಬುದ್ಧನ ಸಂದೇಶ ಮುಕ್ತಿಮಾರ್ಗಕ್ಕೆ ಅನುಕೂಲ’

ಮಂಗಳವಾರ, ಜೂನ್ 18, 2019
31 °C
ಚೌಡಪ್ಪನಹಳ್ಳಿ ಬುದ್ಧವಿಹಾರದಲ್ಲಿ ವೈಶಾಖ ಶುದ್ಧ ಪೂರ್ಣಿಮೆ ಜಯಂತ್ಯುತ್ಸವ

‘ಬುದ್ಧನ ಸಂದೇಶ ಮುಕ್ತಿಮಾರ್ಗಕ್ಕೆ ಅನುಕೂಲ’

Published:
Updated:
Prajavani

ವಿಜಯಪುರ : ಭಗವಾನ್ ಬುದ್ಧನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅವರು ಮುಕ್ತಿಯ ಮಾರ್ಗವನ್ನು ಕಂಡುಕೊಳ್ಳಲಿಕ್ಕೆ ಸುಲಭವಾಗುತ್ತದೆ ಎಂದು ಬುದ್ಧನ ಅನುಯಾಯಿ ಎಸ್.ಸಿದ್ಧಾರ್ಥ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಚೌಡಪ್ಪನಹಳ್ಳಿ ಬುದ್ಧವಿಹಾರದಲ್ಲಿ ಲುಂಬಿನಿ ಸೇವಾ ಟ್ರಸ್ಟ್ ಅಶೋಕ ಬುದ್ಧ ವಿಹಾರ, ನಳಂದ ರೆಸಿಡೆನ್ಸಿಯಲ್ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ 2,563ನೇ ವೈಶಾಖ ಶುದ್ಧ ಪೂರ್ಣಿಮೆ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎರಡು ಸಾವಿರ ವರ್ಷಗಳ ಹಿಂದೆಯೇ ಎಲ್ಲರೂ ಒಂದೇ ಎಂಬುದನ್ನು ವಿಶ್ವಕ್ಕೆ ಸಾದರಪಡಿಸಿದ ಬೌದ್ಧ ಧರ್ಮ ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠ. ಬುದ್ಧ ಎಂಬುದು ಹುಟ್ಟು ಹೆಸರಲ್ಲ. ಹಲವು ಜನ್ಮಗಳ ತಪಸ್ಸು ಸಾಧನೆಯಿಂದ ಅವರು ಪಡೆದ ಮಹಾಸ್ಥಾನ. ಬುದ್ಧ ಎಂದರೆ ಶ್ರೇಷ್ಠ ಜ್ಞಾನಿ. ಜ್ಞಾನದ ಮಹಾ ಬೆಳಕನ್ನು ಕಂಡವರು, ದುಡಿಯುವವರು ಎಂದರ್ಥ. ಬುದ್ಧರ ಜನನವಾದದ್ದು, ಬುದ್ಧ ಜ್ಞಾನಿಯಾದದ್ದು ಬುದ್ಧ ಮಹಾಪರಿನಿರ್ವಾಣ ಹೊಂದಿದ್ದು, ವೈಶಾಖ ಮಾಸದ ಶುದ್ಧ ಹುಣ್ಣಿಮೆಯ ದಿನವಾಗಿದೆ ಎಂದರು.

ದೇಶದಲ್ಲಿ ಜಾತಿ ಧರ್ಮಗಳು ಮಾನವ ನಿರ್ಮಿತವಾದವು. ಭಾರತೀಯ ಸಮಾಜದಲ್ಲಿ ಬೇರೂರಿರುವ ಸಮಾನತೆಯೆಂಬ ದೀಪ ಬೆಳಗಬೇಕಾಗಿದೆ. ಅಂಧಕಾರ, ಮೂಢನಂಬಿಕೆ ಮತ್ತು ತುಳಿತಕ್ಕೊಳಗಾದ ಜನರನ್ನು ಬುದ್ಧ ಹಾಗೂ ಅಂಬೇಡ್ಕರ್ರವರ ಜೀವನದ ಆದರ್ಶಗಳನ್ನು ತಿಳಿಸಿ ಮುಖ್ಯವಾಹಿನಿಗೆ ತರಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಧರ್ಮಗುರು ನ್ಯಾನಲೋಕ ಭಂತೇಜಿ ಮಾತನಾಡಿ, ಕೊಲೆ, ಕುಡಿತ, ಕಳ್ಳತನ, ಸುಳ್ಳು ಹೇಳುವುದು, ವ್ಯಭಿಚಾರ, ಈ ಐದು ಕೆಲಸಗಳನ್ನು ಮನುಷ್ಯ ಮಾಡಬಾರದು ಎಂಬ ಪಂಚಶೀಲ ತತ್ವವನ್ನು ಭಗವಾನ್ ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಸೇರಿದಂತೆ ಎಲ್ಲ ದಾರ್ಶನಿಕರು ಹೇಳುತ್ತಾ ಬಂದಿದ್ದಾರೆ. ಒಬ್ಬೊಬ್ಬರು ತಮ್ಮದೇ ರೀತಿಯಲ್ಲಿ ಜನರಿಗೆ ಉಪದೇಶ ನೀಡಿದ್ದಾರೆ. ಗಾಂಧೀಜಿ ಅವರದು ಹೆಂಡ-ಸರಾಯಿ ಕುಡಿತ ಬಿಡಬೇಕು ಎನ್ನುವುದಾಗಿತ್ತು. ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಾನವತಾವಾದಿ ಬುದ್ದನ ಈ ನುಡಿಗಳು ಇಂದು ನಮ್ಮ ದೇಶದಲ್ಲಿ ಧರ್ಮ, ಜಾತಿ, ಪಂಥ, ಜನಾಂಗಗಳ ಹಿನ್ನಲೆಯಲ್ಲಿ ಹಬ್ಬಿರುವ ಅಸಹಿಷ್ಣುತೆಯ ವಾತಾವರಣವನ್ನು ತಿಳಿಗೊಳಿಸಲು ಮಾರ್ಗದರ್ಶಿಯಾಗುತ್ತದೆ ಎಂದರು.

ಸಂಸ್ಥಾಪಕ ಚೌಡಪ್ಪನಹಳ್ಳಿ ಲೋಕೇಶ್ ಮಾತನಾಡಿ, ಅಂಬೇಡ್ಕರ್‌ ಅವರ ರಾಜಕೀಯ ಚಿಂತನೆಯು ಬುದ್ಧ ತತ್ವವನ್ನು ಬಲವಾಗಿ ಪ್ರತಿಪಾದಿಸುತ್ತದೆ. ಬುದ್ಧನ ನೀತಿ ಹಾಗೂ ಸ್ವಾತಂತ್ರ್ಯವನ್ನು ಎಲ್ಲರಿಗೂ ಸಾಧ್ಯವಾಗಿಸುವ ಪ್ರಜಾವ್ಯವಸ್ಥೆಯನ್ನು ಅಂಬೇಡ್ಕರ್ ಅವರು ತಮ್ಮ ಬರಹಗಳ ಉದ್ದಗಲಕ್ಕೂ ನೆನಪಿಸುತ್ತಾರೆ. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವು ಬುದ್ಧನ ಮಾನವೀಕರಣದ ಸ್ವಾತಂತ್ರ್ಯವನ್ನು ಪ್ರತಿಸೃಷ್ಟಿ ಮಾಡಿದೆ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸುವುದರ ಜೊತೆಗೆ ಪಾಲನೆ ಮಾಡಬೇಕಾಗಿದೆ ಎಂದರು.

ಬುದ್ಧವಿಹಾರದಲ್ಲಿ ರಾತ್ರಿ ಪೂರ್ಣಿಮ ಅಂಗವಾಗಿ ಮೇಣದ ಬತ್ತಿಗಳನ್ನು ಹಚ್ಚಿ, ಪುಷ್ಪ ನಮನ ಸಲ್ಲಿಸಿದರು.

ಮುಖಂಡರಾದ ರಾಮಕೃಷ್ಣ, ಮುನಿರಾಜು, ಟಿ.ಶಂಕರಪ್ಪ, ಹರೀಶ್, ಬಾಲಕೃಷ್ಣ, ಕಾಂತರಾಜ್, ಬಿ.ಎಂ.ಮುನಿರಾಜು, ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !