ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ದಂಪತಿಗೆ ಸಂಸದ ಮೆಚ್ಚುಗೆ

Last Updated 10 ಏಪ್ರಿಲ್ 2020, 12:43 IST
ಅಕ್ಷರ ಗಾತ್ರ

ಅನೇಕಲ್: ತಾಲೂಕಿನ ಜಿಗಣಿ ಹೋಬಳಿ ಹಾರೋಗದ್ದೆ ಗ್ರಾಮದ ರೈತ ದಂಪತಿ ರೂಪಾ –ರವಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕ್ಯಾಪ್ಸಿಕಂ (ದಪ್ಪಮೆಣಸಿನಕಾಯಿ) ಯನ್ನು ಸಂಸದ ಡಿ.ಕೆ. ಸುರೇಶ್ ಅವರಿಗೆೆ ಉಚಿತವಾಗಿ ನೀಡಿದ್ದಾರೆ.

ಸಂಸದ ಡಿ.ಕೆ.ಸುರೇಶ್ ಈಗಾಗಲೇ ತಮ್ಮ ವ್ಯಾಪ್ತಿಯ ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಸಾರ್ವಜನಿಕರಿಗೆ ಹಂಚುವ ಕಾರ್ಯಕ್ರಮ ರೂಪಿಸಿದ್ದಾರೆ. ಅದರಂತೆ ಈ ರೈತ ದಂಪತಿ ಬೆಳೆಯನ್ನು ಖರೀದಿಸಲು ‌ಖುದ್ದು ತೆರಳಿದಾಗ, ಸಂಸದರ ರೈತಪರ ಕಾಳಜಿ ‌ಮೆಚ್ಚಿ ಉಚಿತವಾಗಿ ನೀಡುವ ಮೂಲಕ ತಮ್ಮ ಉದಾರತೆ ಮೆರೆದಿದ್ದಾರೆ ಎಂದು ಸಂಸದರ ಆಪ್ತ ಮೂಲಗಳು ಹೇಳಿವೆ.

ಹಣ ಪಡೆಯಲು ಒಪ್ಪದೇ ಉದಾರತೆ ಮೆರೆದಿರುವ ರೈತ ದಂಪತಿಯನ್ನು ಸಂಸದ ಡಿ.ಕೆ.ಸುರೇಶ್ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT