ಸರ್ಜಾಪುರ (ಆನೇಕಲ್): ಗ್ರಾಮಸ್ಥರ ದೇಣಿಗೆ ಹಾಗೂ ಸರ್ಕಾರದ ಸ್ವಲ್ಪ ಅನುದಾನದಿಂದ ನಿರ್ಮಿಸಿದ ಸರ್ಜಾಪುರ ಸಮೀಪದ ಯಮರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಬೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಶಾಸಕ ಬಿ.ಶಿವಣ್ಣ ಗುರುವಾರ ಉದ್ಘಾಟಿಸಿದರು.

ಚಂಬೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಚಿಕ್ಕ ಕೊಠಡಿಗಳಿದ್ದವು. ಪಾಠಕ್ಕೆ ತೊಂದರೆ ಆಗಿತ್ತು. ಶಾಲಾ ಕಟ್ಟಡ ಸುರಕ್ಷತೆಯ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.

ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಪವಿತ್ರಾ ಜಯಪ್ರಕಾಶ್, ಯಮರೆ ಜಯಶಂಕರ್, ಯಮರೆ ಶ್ರೀನಿವಾಸರೆಡ್ಡಿ, ವಿಜಯಕುಮಾರ್, ಸೋಂಪುರ ಕೆಂಪಣ್ಣ, ಶ್ರೀನಿವಾಸ್, ಮಣಿ, ಸುಬ್ರಮಣಿ, ರಾಮಚಂದ್ರ, ಮಂಜುನಾಥ್, ಅನಿಲಕ್, ಗೋಪಾಲ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಗ್ರಾಮದಲ್ಲಿನ ಸರ್ಕಾರಿ ಆಸ್ತಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಗ್ರಾಮದ ಪ್ರತಿಯೊಬ್ಬರು ಕೊಡುಗೆ ನೀಡಬೇಕು ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಮಹಿಳಾ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷೆ ಸುಶೀಲಮ್ಮ, ನಿವೃತ್ತ ಸೈನಿಕ ವೇಣು, ಮುಖಂಡರಾದ ರಾಜೇಶ್ವರಿ, ಶಾಂತಕುಮಾರ್, ಸಂಪಂಗಿ, ಕೃಷ್ಣ, ಗೋಪಾಲ್, ಮುರುಗೇಶ್, ಮರಿಯಪ್ಪ, ರಮೇಶ್, ಮಂಜುನಾಥ್, ರಂಗರಾಜು, ಕೃಷ್ಣ, ಅಶ್ವಥ್ ನಾರಾಯಣ್, ಪಾಪಣ್ಣ ಇದ್ದರು.

ಹೋಬಳಿಗೊಂದು ಸರ್ಕಾರಿ ಪಿಯು ಕಾಲೇಜು

ಆನೇಕಲ್ ತಾಲ್ಲೂಕಿನ ಪ್ರತಿ ಹೋಬಳಿಯಲ್ಲಿಯೂ ಸರ್ಕಾರಿ ಪಿಯು ಕಾಲೇಜು ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಲವೆಡೆ ಪ್ರೌಢ ಶಾಲಾಗಳ ಅವಶ್ಯಕತೆಯಿದ್ದು ಈ ನಿಟ್ಟಿನಲ್ಲಿ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.