ಚಂದಾಪುರ (ಆನೇಕಲ್): ಚಂದಾಪುರ ಪುರಸಭೆ ವ್ಯಾಪ್ತಿಯ ಸೂರ್ಯಸಿಟಿ ಗೇಟ್ನಿಂದ-ಚಂದಾಪುರ ವೃತ್ತದವರೆಗೂ ರಸ್ತೆ ವಿಭಜಕವು ಕಸ ಸುರಿಯುವ ಜಾಗವಾಗಿ ಮಾರ್ಪಟ್ಟಿದೆ.

ಚಂದಾಪುರ ಪುರಸಭೆಯ ನಿರ್ಲಕ್ಷ್ಯ, ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ತಾಳಿರುವ ಮೃದು ಧೊರಣೆಯಿಂದ ಒಂದೂವರೆ ಕಿ.ಮೀ ರಸ್ತೆ ವಿಭಜಕವು ಗಬ್ಬುನಾರುತ್ತಿದ್ದು, ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಅಲ್ಲದೆ ರಸ್ತೆ ವಿಭಜಕ ಸ್ವಚ್ಛಗೊಳಿಸುವುದು ಪೌರಕಾರ್ಮಿಕರಿಗೆ ದೊಡ್ಡ ತಲೆನೋವಾಗಿದೆ.

ಪಟ್ಟಣವನ್ನು ಕಸಮುಕ್ತಗೊಳಿಸುತ್ತೇವೆ, ಕಸ ಸುರಿಯುವವರ ವಿರುದ್ಧ ಎಫ್ಐಆರ್, ದಾಖಲು, ಎಲ್ಲೆಂದರಲ್ಲಿ ಕಸ ಸುರಿಯುವವರ ಮೇಲೆ ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ವಿಭಜಕಗಳಲ್ಲಿ ಗಿಡ ನೆಟ್ಟು ಪೋಷಿಸಲಾಗುವುದು ಎಂದೇಳೆ ಪ್ರಚಾರ ಪಡೆದುಕೊಂಡಿದ್ದ ಪುರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈಗ ಜಾಣ ಕುರುಡರಾಗಿದ್ದಾರೆ. ಇದರಿಂದ ಪಟ್ಟಣದಲ್ಲಿ ತ್ಯಾಜ್ಯದ ಸಮಸ್ಯೆ ಕಸದ ರಾಶಿಯಂತೆ ಬೆಳೆಯುತ್ತಿದೆ.

ಕ್ರಮ ವಹಿಸದ ಪುರಸಭೆ: ಹಲವು ತಿಂಗಳುಗಳಿಂದ ರಸ್ತೆ ವಿಭಜಕಗಳಲ್ಲಿ ಕಸ ಸುರಿಯಲಾಗುತ್ತಿದೆ. ಆದರೆ ಚಂದಾಪುರ ಪುರಸಭೆಯು ದಿವ್ಯ ನಿರ್ಲಕ್ಷ್ಯ ವಹಿಸಿದೆ. ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ವಹಿಸಬೇಕಾದವರೇ ಕಣ್ಣು ಮುಚ್ಚಿ ಕುಳಿತಿರುವುದರಿಂದ ಕಸ ಎಸೆಯುವವರ ಯಾವುದೇ ಲಂಗು ಲಗಾಮಿಲ್ಲದೇ ಬೇಕಾಬಿಟ್ಟಿಯಾಗಿ ಕಸ ಎಸೆಯುತ್ತಿದ್ದಾರೆ. ಕಸ ಎಸೆದವರಿಗೆ ದಂಡ ಹಾಕಬೇಕು, ಕಸ ಹಾಕುವ ವಾಹನ ಸಂಖ್ಯೆಯನ್ನು ದಾಖಲಿಸಿ ಎಫ್ಐಆರ್ ಮಾಡಿಸುವಂತಹ ದಿಟ್ಟ ಕ್ರಮ ವಹಿಸಬೇಕು. ಆಗ ಮಾತ್ರ ಚಂದಾಪುರದ ಸ್ವಚ್ಛತೆ ಕಾಪಾಡಬಹುದು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-15-1089285491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.