ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ: ಬಾಲ್ಯ ವಿವಾಹ ತಡೆದ ಅಧಿಕಾರಿಗಳು

Published 25 ಆಗಸ್ಟ್ 2024, 16:15 IST
Last Updated 25 ಆಗಸ್ಟ್ 2024, 16:15 IST
ಅಕ್ಷರ ಗಾತ್ರ

ಹೊಸಕೋಟೆ: ನಗರದಲ್ಲಿ 15 ವರ್ಷದ ಬಾಲಕಿ ಮತ್ತು 25 ವರ್ಷದ ಯವಕನೊ‌ಡನೆ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಾರೆ.

ಬಾಲ್ಯ ವಿವಾಹ ಕುರಿತು ಖಚಿತ ಮಾಹಿತಿಯೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಇತರೆ ಇಲಾಖೆಯ ಅಧಿಕಾರಿಗಳು ಕಲ್ಯಾಣ ಮಂಟಪದ ಮೇಲೆ ದಾಳಿ ನಡೆಸಿ, ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಗಸ್ಟ್‌ 24ರಂದು ಅರತಕ್ಷತೆ ಮುಗಿದಿತ್ತು. 25ರಂದು ಮದುವೆ ನಿಶ್ಚಿಯವಾಗಿತ್ತು. ಶನಿವಾರ ತಡರಾತ್ರಿ 9.30ರ ಸಮಯದಲ್ಲಿ ಹರಿಶಿನ ಶಾಸ್ತ್ರ ಮಾಡುತಿದ್ದ ವೇಳೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅನಿತಾ ಲಕ್ಷ್ಮಿ ನೇತೃತ್ವದ ಪೋಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದೆ. ಬಾಲಕಿಯನ್ನು ದೊಡ್ಡಬಳ್ಳಾಪುರದ ಮಕ್ಕಳ ಅಭ್ಯುದಯ ಸಂಸ್ಥೆಯಲ್ಲಿ ಇರಿಸಲಾಗಿದೆ.

ಆಗಸ್ಟ್ 26 ರಂದು ಮಕ್ಕಳ ಸಂರಕ್ಷಣಾ ಸಮಿತಿ ಸಭೆಯ ತೀರ್ಮಾನದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಎಸಿಡಿಪಿಒ ಶಿವಮ್ಮ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT