ಶನಿವಾರ, ನವೆಂಬರ್ 23, 2019
17 °C

‘ಕಸ ಅಕ್ರಮ ವಿಲೇವಾರಿ ಘಟಕ ತೆರವುಗೊಳಿಸಿ’

Published:
Updated:

ಸೂಲಿಬೆಲೆ: ಇಲ್ಲಿನ ಬತ್ತಿಗಾನಹಳ್ಳಿ ಬೇಚಾರಕ್ ಗ್ರಾಮದ ಸರ್ವೇ ನಂಬರಿನ ಜಮೀನಿನಲ್ಲಿ ಕಸ ಅಕ್ರಮ ವಿಲೇವಾರಿ ಘಟಕ ನಡೆಸುತ್ತಿದ್ದು ಶೀಘ್ರವಾಗಿ ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇಲ್ಲಿ ನಗರ ಪ್ರದೇಶದಿಂದ ಕಸವನ್ನು ತಂದು ವಿಲೇವಾರಿ ಮಾಡಲಾಗುತ್ತಿದ್ದು, ಅದರಲ್ಲಿರುವ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ವಿಂಗಡಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಇಲ್ಲಿನ ಪರಿಸರ ಕಲುಷಿತಗೊಳ್ಳುತ್ತಿದೆ ಹಾಗೂ ನಾಯಿಗಳ ಹಾವಳಿ ಹೆಚ್ಚಿದೆ ಎಂದು ಅವರು ದೂರಿದ್ದಾರೆ.

ಕುಂಟೆ ಕಲುಷಿತ: ದರ್ಗಾ ಪಕ್ಕದಲ್ಲೇ ಕುಂಟೆ ಇದ್ದು ಮಳೆಗಾಲದ ನಂತರವೂ ಸುಮಾರು ತಿಂಗಳುಗಳ ಕಾಲ ನೀರು ಶೇಖರಣೆಯಾಗಿ ಪ್ರಾಣಿ, ಪಕ್ಷಿಗಳಿಗೆ ನೀರು ಒದಗಿಸುತ್ತದೆ. ಕುಂಟೆಯ ಪಕ್ಕದಲ್ಲೇ ಕಾರ್ಮಿಕರ ವಸತಿ ಗುಡಿಸಲು ಇವೆ. ನಾಯಿಗಳು ಎಳೆದು ತಂದು ಹಾಕುವ ಕಸ ಕುಂಟೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ.

ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳ ಕೊರತೆ: ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಬೇರೆಡೆಯಿಂದ ಗುಳೆ ಬಂದಿದ್ದು, ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸೇವೆಗಳಿಂದ ವಂಚಿತರಾಗಿದ್ದಾರೆ. ಪ್ಲಾಸ್ಟಿಕ್ ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವುದರಿಂದ ಇಲ್ಲಿನ ಕಾರ್ಮಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕ ಅವರಲ್ಲಿದೆ.

ನಾಯಿಗಳ ಹಾವಳಿ: ಕಸ ವಿಲೇವಾರಿ ಘಟಕದ ಸಮೀಪ ದರ್ಗಾ ಹಾಗೂ ಆಶ್ರಮ ಇದ್ದು, ಅನೇಕ ಭಕ್ತರು ಭೇಟಿ ನೀಡುವ ಧಾರ್ಮಿಕ ತಾಣವಾಗಿರುವುದರಿಂದ ಇಲ್ಲಿ ಬರುವಂತಹ ಭಕ್ತರಿಗೆ ನಾಯಿ ಹಾವಳಿಯ ಭಯ ಇದೆ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)