ಕೊಯಿರಾ ಪ್ರತ್ಯೇಕ ಸಹಕಾರ ಸಂಘಕ್ಕೆ ಅಧಿಕಾರಿಗಳೇ ಅಡ್ಡಿ 

7

ಕೊಯಿರಾ ಪ್ರತ್ಯೇಕ ಸಹಕಾರ ಸಂಘಕ್ಕೆ ಅಧಿಕಾರಿಗಳೇ ಅಡ್ಡಿ 

Published:
Updated:
Deccan Herald

ದೇವನಹಳ್ಳಿ: ವಿಶ್ವನಾಥಪುರ ವ್ಯವಸಾಯ ಸೇವಾ ಸಹಕಾರ ಸಂಘವೇ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿ ಹೊಂದಿರುವುದರಿಂದ, ಕೊಯಿರಾ ಪಂಚಾಯಿತಿಗೆ ಪ್ರತ್ಯೇಕ ಸಹಕಾರ ಸಂಘ ಸ್ಥಾಪಿಸಲು ಅಧಿಕಾರಿಗಳು ಅಡ್ಡಿ ಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಜಿಲ್ಲಾ ಸಹಕಾರ ಸಂಘದ ನಿಬಂಧಕರಿಗೆ ಮತ್ತು ವ್ಯವಸ್ಥಾಪಕರಿಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಗಾಗಿ ಜಿಲ್ಲಾ ಮಟ್ಟದ ಸಮಿತಿ ರಚಿಸುವಂತೆ ಕಳೆದ ಸಾಲಿನಲ್ಲಿಯೇ ಸರ್ಕಾರ ಆದೇಶಿಸಿತ್ತು.

ಬೇರೆ ಸಂಘದಿಂದ 5 ಕಿ.ಮೀ ದೂರದಲ್ಲಿ , 4 ಸಾವಿರ ಎಕರೆ ಸಾಗುವಳಿ ಭೂಮಿ ಹೊಂದಿರುವ ಹಾಗೂ ಕನಿಷ್ಠ 600 ಕುಟುಂಬಗಳು ವಾಸವಿರುವ ಗ್ರಾಮದಲ್ಲಿ ಸಂಘ ಸ್ಥಾಪಿಸಬಹುದೆಂದು ಆದೇಶದಲ್ಲಿ ತಿಳಿಸಲಾಗಿದೆ.

ಸಹಕಾರ ಸಂಘ ಸ್ಥಾಪನೆಗೆ ವಿಶ್ವನಾಥಪುರ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ‌ಎಚ್‌.ಎಂ.ರವಿಕುಮಾರ್‌ 2017ರ ಆಗಸ್ಟ್‌ 8ರಂದು ಸಹಾಯಕ ನಿಬಂಧಕರಿಗೆ ಮತ್ತು ಸಹಕಾರ ಸಂಘದ ಅಧ್ಯಕ್ಷ ಮತ್ತು ಸಿಇಒರಿಗೆ ಮನವಿ ನೀಡಿದ್ದರು.

ಅಧಿಕಾರಿಗಳು ಇವರ ಮನವಿಗೆ ಸ್ಪಂದಿಸಿದ ಕಾರಣ, ಸರ್ಕಾರದ ಆದೇಶದಂತೆ ಕೊಯಿರಾ ಗ್ರಾಮವು ಎಲ್ಲ ಮಾನದಂಡವನ್ನು ಪೂರೈಸಿದ್ದು, ಅರ್ಹತೆ ಪಡೆದಿದೆ ಎಂದು ಮೇಲ್ಪನವಿ ಸಲ್ಲಿಸಿದ್ದರು.

ಇದರಿಂದ ಎಚ್ಚೆತ್ತ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ 2017ರ ನವಂಬರ್‌ 8ರಂದು ಸಹಾಯಕ ನಿಬಂಧಕರಿಗೆ ಪತ್ರ ಬರೆದಿದ್ದರು. ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಕೊಯಿರಾ ಗ್ರಾಮ ಪಂಚಾಯಿತಿಗೆ ಪ್ರದೇಶವನ್ನು ಸಂಘದ ವ್ಯಾಪ್ತಿಯಿಂದ ಬಿಡುಗಡೆ ಮಾಡಬಹುದು ಎಂದು ತೀರ್ಮಾನಿಸಲಾಗಿದೆ ಎಂದು ಉಲ್ಲೇಖಿಸಿದ್ದರು.

ಐದು ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಸಹಕಾರ ಸಂಘಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಕೃಷಿ ಭೂಮಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಕೃಷಿ ಪತ್ತಿನ ಸಹಕಾರ ಸಂಘ ಆರಂಭಬಿಸಬಹುದು ಎಂದು ತಿಳಿಸಿರುವ ಸರ್ಕಾರ ಸುತ್ತೋಲೆ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಜನಸಂಖ್ಯೆ ಹೆಚ್ಚುತ್ತಿದ್ದು, ಕುಟುಂಬ ವಿಭಜನೆಯಿಂದ ಭೂ ಹಿಡುವಳಿ ಕಡಿಮೆಯಾಗುತ್ತಿದೆ. ರೈತನ ಮನೆ ಬಾಗಿಲಿಗೆ ಬ್ಯಾಂಕಿನ ಸೌಲಭ್ಯ ಮತ್ತು ಕೃಷಿ ಪರಿಕರ ಒದಗಿಸಲು ಸಹಕಾರ ಸಂಘ ನೂತನವಾಗಿ ಆರಂಭಿಸುವುದು ಅನಿವಾರ್ಯ ಎಂಬುದು ಹಿಂದಿನ ಸರ್ಕಾರದ ಕಾಳಜಿಯಾಗಿತ್ತು.

ಪ್ರತ್ಯೇಕ ಸಹಕಾರ ಸಂಘಕ್ಕೆ ಪ್ರಸ್ತಾವನೆ ಸಲ್ಲಿಸಿ 18 ತಿಂಗಳುಗಳೇ ಕಳೆದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈವರೆಗೂ ಸಂಘ ಅಸ್ತಿತ್ವಕ್ಕೆ ಬಂದಿಲ್ಲ ಎಂಬುದು ಸ್ಥಳೀಯ ಸದಸ್ಯರ ಆರೋಪ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !