ರೇಷ್ಮೆಗೂಡು ಪ್ರೋತ್ಸಾಹಧನ ಜು.9 ರಿಂದ ಪೂರ್ವಾನ್ವಯ: ಆಯುಕ್ತ ಮಂಜುನಾಥ್ ಹೇಳಿಕೆ

7
ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿದ ಇಲಾಖೆ

ರೇಷ್ಮೆಗೂಡು ಪ್ರೋತ್ಸಾಹಧನ ಜು.9 ರಿಂದ ಪೂರ್ವಾನ್ವಯ: ಆಯುಕ್ತ ಮಂಜುನಾಥ್ ಹೇಳಿಕೆ

Published:
Updated:
Deccan Herald

ವಿಜಯಪುರ: ರೇಷ್ಮೆಗೂಡು ಉತ್ಪಾದನೆ ಮಾಡುವ ರೈತರಿಗೆ ಕೆ.ಜಿ.ಗೂಡಿನ ಬೆಲೆ ₹290ಕ್ಕಿಂತ ಕಡಿಮೆಗೆ ಹರಾಜಾದಾದರೆ ಅಂತಹ ರೈತರಿಗೆ ಜುಲೈ19ರಿಂದ ಪೂರ್ವಾನ್ವಯವಾಗುವಂತೆ ಪ್ರೋತ್ಸಾಹ ಧನ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಇಲಾಖೆ ಆಯುಕ್ತ ಮಂಜುನಾಥ್ ಹೇಳಿದರು.

ರೇಷ್ಮೆಗೂಡು ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿದ ಅವರು, ಮಾರಾಟ ವ್ಯವಸ್ಥೆ ಪರಿಶೀಲನೆ ನಡೆಸಿ ನಂತರ ರೀಲರ್‌ಗಳೊಂದಿಗೆ ಮಾತನಾಡಿದರು.

ರೈತರು ಉತ್ತಮ ಗುಣಮಟ್ಟದ ಗೂಡು ಬೆಳೆಯಬೇಕು. ರೀಲರ್‌ಗಳು ಉತ್ತಮ ಗುಣಮಟ್ಟದ ಕಚ್ಚಾ ರೇಷ್ಮೆ ಉತ್ಪಾದನೆ ಮಾಡಬೇಕು. ರೈತರಿಗೆ ಆಗುತ್ತಿರುವ ಸಮಸ್ಯೆ ನಿವಾರಣೆ ಮಾಡಲು ಇಲಾಖೆ ಸದಾ ಸಿದ್ಧವಾಗಿದೆ ಎಂದರು.

ಬಿಚ್ಚಾಣಿಕೆದಾರರ ಸಮಸ್ಯೆಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ಕೆಎಸ್‌ಎಂಬಿಯಿಂದ ರೇಷ್ಮೆ ಖರೀದಿ ಮಾಡಿಕೊಂಡರೂ ಬೇಡಿಕೆ ಇಲ್ಲದ ಕಾರಣ ಸ್ವಲ್ಪ ಸಮಸ್ಯೆಯಾಗಿತ್ತು. ಈಗ ಬೇಡಿಕೆ ಬಂದಿದ್ದು ಖರೀದಿ ಮಾಡುತ್ತಿದ್ದಾರೆ. ಒಂದು ವೇಳೆ ಖರೀದಿ ಮಾಡದಿದ್ದರೆ, ಕೂಡಲೇ ಪರಿಶೀಲನೆ ಮಾಡುವುದಾಗಿ’ ಭರವಸೆ ನೀಡಿದರು.

‘ಉತ್ಪಾದನೆ ಮಾಡುವಂತಹ ರೇಷ್ಮೆನೂಲಿನ ಬೆಲೆ ಕಡಿಮೆಯಾದಾಗ ಸಿಗುತ್ತಿದ್ದ ಪ್ರೋತ್ಸಾಹ ಧನ ಇದುವರೆಗೂ ಸರ್ಕಾರ ಬಿಡುಗಡೆ ಮಾಡಿಲ್ಲ. ಕನಿಷ್ಠ ಸಹಾಯಧನವನ್ನಾದರೂ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು’ ಎಂದು ಒತ್ತಾಯಿಸಿದರು.

ಸರ್ಕಾರ ನಿಗದಿಪಡಿಸಿರುವ ನಿಬಂಧನೆ ಅನುಸರಿಸಬೇಕಾದರೆ ಶೇ80ರಷ್ಟು ರೀಲರ್‌ಗಳಿಗೆ ದುಡಿಮೆ ಬಂಡವಾಳ ಸಿಗುವುದಿಲ್ಲ. ಬ್ಯಾಂಕ್ ಇಲ್ಲವೇ ಕೈಸಾಲ ಮಾಡಿಕೊಂಡು ರೇಷ್ಮೆಗೂಡು ಖರೀದಿ ಮಾಡಿ ಜೀವನ ಸಾಗಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರೇಟರ್ ಬದಲಾಗಿ ಸೋಲಾರ್‌ ನೀಡುವಂತೆ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಅವಲತ್ತುಕೊಂಡರು.

ಮಾರುಕಟ್ಟೆಯಲ್ಲಿ ನೋಂದಣಿ ಇಲ್ಲದ ರೀಲರ್‌ಗಳು ಬರುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಅವರಿಗೆ ಕಡಿವಾಣ ಹಾಕಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪಾಸ್ ಪುಸ್ತಕಗಳಿರುವ ರೈತರು ಮಾತ್ರವೇ ಗೂಡು ತರಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಾರುಕಟ್ಟೆಯ ಅಧಿಕಾರಿ ಮುನಿರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !