ಅತ್ತಿಬೆಲೆಯಲ್ಲಿ ಪ್ರಯಾಣಿಕರ ಪರದಾಟ

7

ಅತ್ತಿಬೆಲೆಯಲ್ಲಿ ಪ್ರಯಾಣಿಕರ ಪರದಾಟ

Published:
Updated:
Deccan Herald

ಆನೇಕಲ್ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಮೃತಪಟ್ಟ ಕಾರಣ ಗಡಿ ಭಾಗ ಅತ್ತಿಬೆಲೆಯಲ್ಲಿ ವಾಹನ ಸಂಚಾರ ಸ್ಥಗಿತವಾದ ಕಾರಣ ತಮಿಳುನಾಡಿಗೆ ತೆರಳುತ್ತಿದ್ದ ಪ್ರಯಾಣಿಕರು ಪರದಾಡಿದರು.

ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿಗೆ ತೆರಳುವ ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಬೆಂಗಳೂರಿನಿಂದ ತಮಿಳುನಾಡಿನ ಕಡೆಗೆ ತೆರಳುತ್ತಿದ್ದ ಪ್ರಯಾಣಿಕರು ಅತ್ತಿಬೆಲೆ ಗಡಿಯಲ್ಲಿ ಪರದಾಡುವಂತಾಯಿತು.

ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಅತ್ತಿಬೆಲೆವರೆಗೂ ಮಾತ್ರ ಸಂಚರಿಸಿದವು. ಕರ್ನಾಟಕ ನೋಂದಣಿಯ ವಾಹನಗಳನ್ನು ಪೊಲೀಸರು ಅತ್ತಿಬೆಲೆಯ ಟೋಲ್ ಬಳಿ ತಡೆದರು. ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಕೈಗಾರಿಕ ಪ್ರದೇಶಗಳಿದ್ದು
ರಾತ್ರಿ ಪಾಳಿಗೆ ಕೆಲಸಕ್ಕೆ ತೆರಳಬೇಕಾದ ಕಾರ್ಮಿಕರು ಪರದಾಡಿದರು.

ಪೊಲೀಸರು ಗಡಿಯಲ್ಲಿ ಬಾರ್‌ಗಳು, ಪಟಾಕಿ ಅಂಗಡಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂದ್ ಮಾಡಿಸಿದರು. ಡಿವೈಎಸ್ಪಿ ಎಸ್.ಕೆ.ಉಮೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಎಲ್.ವೈ.ರಾಜೇಶ್ ಅತ್ತಿಬೆಲೆ ಗಡಿಯಲ್ಲಿ ಹಾಜರಿದ್ದು ಬಂದೋಬಸ್ತ್ ಉಸ್ತುವಾರಿ ನಡೆಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !