ಜನರ ದಿಕ್ಕು ತಪ್ಪಿಸುವ ಕಾಂಗ್ರೆಸ್‌, ಬಿಜೆಪಿ: ಬಂಗಾರಪ್ಪ

ಬುಧವಾರ, ಏಪ್ರಿಲ್ 24, 2019
32 °C

ಜನರ ದಿಕ್ಕು ತಪ್ಪಿಸುವ ಕಾಂಗ್ರೆಸ್‌, ಬಿಜೆಪಿ: ಬಂಗಾರಪ್ಪ

Published:
Updated:
Prajavani

ವಿಜಯಪುರ: ಪ್ರತಿ ಚುನಾವಣೆಯಲ್ಲೂ ಜನರ ದಿಕ್ಕು ತಪ್ಪಿಸುವ ಕಾಂಗ್ರೆಸ್, ಬಿಜೆಪಿ ನಂಬದೆ ಬಿಎಸ್‌ಪಿಗೆ ಮತ ನೀಡುವಂತೆ ತಾಲ್ಲೂಕು ಘಟಕದ ಅಧ್ಯಕ್ಷ ಬಂಗಾರಪ್ಪ ಮನವಿ ಮಾಡಿದರು.

ಹೋಬಳಿ ವೆಂಕಟೇನಹಳ್ಳಿ ಗ್ರಾಮದಲ್ಲಿ ಬಿಎಸ್‌ಪಿ ಅಭ್ಯರ್ಥಿ ಸಿ.ಎಸ್.ದ್ವಾರಕಾನಾಥ್ ಪರವಾಗಿ ಮತಯಾಚಿಸಿ ಮಾತನಾಡಿದರು.

ಈ ದೇಶದ ಬಡವರು, ತುಳಿಕ್ಕೆ ಒಳಗಾಗಿರುವವರು, ಆರ್ಥಿಕ ದುರ್ಬಲರ ಏಳಿಗೆಗಾಗಿ ಹುಟ್ಟಿಕೊಂಡ ಏಕೈಕ ಪಕ್ಷ ಬಹುಜನ ಸಮಾಜವಾದಿ ಪಕ್ಷ. ಮಾಯಾವತಿ ಅವರು ಪ್ರಧಾನಿಯಾಗುವ ಅವಕಾಶ ಹೊಂದಿದ್ದಾರೆ. ಅವರು ಪ್ರಧಾನಿಯಾದರೆ ದೇಶಕ್ಕೆ ಒಳ್ಳೆಯ ದಿನಗಳು ಬರಲು ಸಾಧ್ಯವಿದೆಯೇ ಹೊರತು, ಕಾಂಗ್ರೆಸ್, ಬಿಜೆಪಿಯಿಂದ ಅದು ಸಾಧ್ಯವಿಲ್ಲ. ಈ ಭಾಗದಲ್ಲಿನ ಸಮಸ್ಯೆಗಳ ಕುರಿತು ಧ್ವನಿಯೆತ್ತಲು ಚಿಂತಕ, ವಕೀಲ ದ್ವಾರಕಾನಾಥ್ ಅವರಿಗೆ ಮತ ನೀಡಲು ಮನವಿ ಮಾಡಿದರು.

ಮುಖಂಡರಾದ ರವಿಕಲಾ ಮಾತನಾಡಿ, ಈ ದೇಶದ ಹೆಣ್ಣು ಮಕ್ಕಳು ನೆಮ್ಮದಿ ಜೀವನ ನಡೆಸಲು ಬಿಎಸ್‌ಪಿ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ ಎಂದರು.

ಮುಖಂಡರಾದ ನಾರಾಯಣಸ್ವಾಮಿ, ನಂದಗುಂದ ವೆಂಕಟೇಶ್, ಚಪ್ಪರಕಲ್ಲು ರಾಜಣ್ಣ, ನರಸಿಂಹಮೂರ್ತಿ, ರಾಮಾಂಜಿನಪ್ಪ, ನರಸಿಂಹಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !