ಗುರುವಾರ , ಫೆಬ್ರವರಿ 20, 2020
27 °C

ಹೊಸಕೋಟೆ| ಕಾಂಗ್ರೆಸ್– ಸ್ವಾಭಿಮಾನಿ ಪಕ್ಷ ಹೊಂದಾಣಿಕೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ತಾಲ್ಲೂಕಿನ ಸ್ವಾಭಿಮಾನಿ ಪಕ್ಷದವರು ಹೊಂದಾಣಿಕೆಗೆ ಮುಂದಾದರೆ ಸೀಟು ಹಂಚಿಕೊಂಡು ಚುನಾವಣೆ ಎದುರಿಸುತ್ತೇವೆ. ಇಲ್ಲದಿದ್ದರೆ ಎಲ್ಲ 31 ವಾರ್ಡ್‌ಗಳಲ್ಲೂ ಕಾಂಗ್ರೆಸ್‌ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮುನಿಶಾಮಣ್ಣ ಹೇಳಿದರು.

ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ನಗರಸಭೆ ಚುನಾವಣಾ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶರತ್ ಬಚ್ಚೇಗೌಡರ ಸ್ವಾಭಿಮಾನಿ ಪಕ್ಷವೊಂದೇ ಮುಂದಿನ ನಗರಸಭಾ ಚುನಾವಣೆಯಲ್ಲಿ ಎರುರಾಳಿ; ಹೊರತು ಬಿಜೆಪಿ ಅಲ್ಲ ಎಂದು ಕಳೆದ ವಿಧಾನಸಭಾ ಚುನಾವಣೆಯ ನಂತರ ತಾಲ್ಲೂಕಿನಲ್ಲಿ ವಿವಿಧ ಒಂಬತ್ತು ಚುನಾವಣೆಗಳನ್ನು ಎದುರಿಸಲಾಗಿದೆ. ಎಲ್ಲ ಚುನಾವಣೆಗಳಲ್ಲಿ ಪಕ್ಷ ಉತ್ತಮ ಸ್ಪರ್ಧೆ ನೀಡಿದೆ. ಬಿಜೆಪಿ ಎಲ್ಲಿಯೂ ಕಾಣಿಸಿಕೊಂಡಿಲ್ಲ ಎಂದರು.

‘ಪದಾಧಿಕಾರಿಗಳು ಶ್ರಮ ಪಟ್ಟು ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ನಗರಸಭೆ ನಮ್ಮ ವಶದಲ್ಲಿಯೇ ಮುಂದುವರಿಯುತ್ತದೆ. ಯಾರಿಗಾದರೂ ಕೆಲಸ ಮಾಡಲು ಸಮಸ್ಯೆಯಾದರೆ ಕೂಡಲೇ ರಾಜಿನಾಮೆ ಕೊಡಿ’ ಎಂದು ಸೂಚಿಸಿದರು.

ಕೆಪಿಸಿಸಿ ಸದಸ್ಯ ತಿರುವರಂಗ ನಾರಾಯಣಸ್ವಾಮಿ, ಅಬ್ದುಲ್ ಕಯೂಮ್, ಫಯಾಜ್ ಮಾತನಾಡಿದರು. ಮುಖಂಡರಾದ ತಾ.ರಾ. ವೆಂಕಟೇಶ್, ಶಿವಾನಂದ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು