ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್ | 9 ಮಂದಿಗೆ ಕೋವಿಡ್‌ ದೃಢ: ಸರ್ಕಾರಿ ಆಸ್ಪತ್ರೆ ಸೀಲ್‌ಡೌನ್

ಆಸ್ಪತ್ರೆ ಸೀಲ್‌ಡೌನ್: ಪ್ರಕರಣಗಳ ಸಂಖ್ಯೆ 37ಕ್ಕೆ ಏರಿಕೆ
Last Updated 26 ಜೂನ್ 2020, 5:44 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ವಿವಿಧೆಡೆ ಒಂದೇ ದಿನ 9 ಮಂದಿಗೆ ಕೋವಿಡ್‌ದೃಢಪಟ್ಟಿದೆ.ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್‌ ಒಬ್ಬರಿಗೆ ಕೋವಿಡ್‌‌ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು 24 ಗಂಟೆಗಳ ಕಾಲ ಸೀಲ್‌ಡೌನ್‌ ಮಾಡಲಾಗಿದೆ.

ಹೆರಿಗೆ ಮತ್ತು ತುರ್ತು ಪ್ರಕರಣ ಹೊರತು ಪಡಿಸಿ ಆಸ್ಪತ್ರೆಯ ಹೊರರೋಗಿಗಳು ಸೇರಿದಂತೆ ಎಲ್ಲಾ ವಿಭಾಗಗಳನ್ನು ಮುಚ್ಚಲಾಗಿದೆ. ವೈದ್ಯರು ಮತ್ತು ನರ್ಸ್‌ ಅವರ ಪ್ರಾಥಮಿಕ ಸಂಪರ್ಕ ಹೊಂದಿದ್ದವರ ಮಾಹಿತಿಗಳನ್ನು ಕಲೆಹಾಕಲಾಗಿದ್ದು ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು ವರದಿಗಾಗಿ ಕಾಯಲಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನಳಿನಾ ತಿಳಿಸಿದರು.

ತಾಲ್ಲೂಕಿನ ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಯಲ್ಲಿ 5 ಕೊರೊನಾ ಪಾಸಿಟಿವ್‌ ಪ್ರಕರಣಪತ್ತೆಯಾಗಿವೆ. ಬೊಮ್ಮಸಂದ್ರ ಆರ್.ಎಸ್‌.ಗಾರ್ಡೆನಿಯಾ ಲೇಔಟ್‌ನಲ್ಲಿ ನಾಲ್ಕು ಮಂದಿಗೆ ಮತ್ತು ಬೊಮ್ಮಸಂದ್ರ ಪುರಸಭೆಯ 5ನೇ ವಾರ್ಡ್‌ನಲ್ಲಿ 60 ವರ್ಷದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್‌ ದೃಢಪಟ್ಟಿದೆ. ಆರ್‌.ಎಸ್‌.ಗಾರ್ಡೇನಿಯಾ ಲೇಔಟ್‌ನ್ನು ಕಂಟೈನ್ಮೆಂಟ್‌‌ ಝೋನ್‌ ಎಂದು ಘೋಷಿಸಲಾಗಿದೆ. ಅತ್ತಿಬೆಲೆ ಮತ್ತು ಆನೇಕಲ್‌ನಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ತಾಲ್ಲೂಕಿನಲ್ಲಿ ಒಟ್ಟು 37 ಪ್ರಕರಣಗಳು ದಾಖಲಾಗಿದ್ದು, 30 ಪ್ರದೇಶಗಳನ್ನು ಪ್ರದೇಶಗಳನ್ನು ಕಂಟೈನ್ಮೆಂಟ್‌‌ ಝೋನ್‌ಗಳೆಂದು ಘೋಷಣೆ ಮಾಡಲಾಗಿದೆ. ಎಂದು ತಹಶೀಲ್ದಾರ್‌ ಸಿ.ಮಹಾದೇವಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT