ಮದುವೆಯ ದಿನವೇ ಮತಚಲಾಯಿಸಿದ ಜೋಡಿ

ಸೋಮವಾರ, ಮೇ 27, 2019
33 °C

ಮದುವೆಯ ದಿನವೇ ಮತಚಲಾಯಿಸಿದ ಜೋಡಿ

Published:
Updated:
Prajavani

ಆನೇಕಲ್: ಲೋಕಸಭಾ ಚುನಾವಣೆಗೆ ಮತದಾನದ ಪ್ರಕ್ರಿಯೆ ಗುರುವಾರ ಶಾಂತಿಯುತವಾಗಿ ನಡೆಯಿತು. ಮಂದಗತಿಯಲ್ಲಿ ಪ್ರಾರಂಭವಾದ ಮತದಾನ 10 ಗಂಟೆಯ ನಂತರ ಬಿರುಸಾಯಿತು. ಸಾಲಿನಲ್ಲಿ ನಿಂತು ಮತದಾರರು ಹಕ್ಕು ಚಲಾಯಿಸಿದರು. 

ಗುಡ್ಡಹಟ್ಟಿ ಮತಗಟ್ಟೆ ಸಂಖ್ಯೆ 186ರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಕೆಲಕಾಲ ಮತದಾನ ಸ್ಥಗಿತವಾಗಿತ್ತು. ಮತಯಂತ್ರವನ್ನು ಬದಲಾಯಿಸಿದ ನಂತರ ಮತದಾನ ಪ್ರಾರಂಭವಾಯಿತು. ಮಟ್ಟನಹಳ್ಳಿ ಕೇಂದ್ರದಲ್ಲಿ ಮತಯಂತ್ರ ಕೆಟ್ಟಿದ್ದರಿಂದ ತಡವಾಗಿ ಮತದಾನ ಪ್ರಾರಂಭವಾಯಿತು. ತಾಲ್ಲೂಕಿನ ಹಲವು ಮತಗಟ್ಟೆಗಳಲ್ಲಿ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳಲ್ಲಿ ಸಮಸ್ಯೆ ಉಂಟಾಯಿತು. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಗಣಿ ಹಾಗೂ ರಾಗಿಹಳ್ಳಿ ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತವಾಗಿತ್ತು. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಅವುಗಳನ್ನು ಸರಿಪಡಿಸಿದರು. 

ಅಂಗವಿಕಲರು ಹಾಗೂ ವೃದ್ಧರಿಗೆ ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ವತಿಯಿಂದ ವೀಲ್‌ಚೇರ್‌ ವ್ಯವಸ್ಥೆ ಮಾಡಲಾಗಿತ್ತು. ಆನೇಕಲ್ ಶಾಸಕ ಬಿ.ಶಿವಣ್ಣ ಕುಟುಂಬದೊಂದಿಗೆ ಆಗಮಿಸಿ ಇಗ್ಗಲೂರು ಮತಗಟ್ಟೆಯಲ್ಲಿ ಮತಚಲಾಯಿಸಿದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಅವರು ಆನೇಕಲ್‌ನ ಗೋಪಾಲರಾಜು ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ವಧು–ವರರಿಂದ ಮತ ಚಲಾವಣೆ: ಆದೂರು ಗ್ರಾಮದ ಸುಮಂತ್ ಹಾಗೂ ಚಂದಾಪುರದ ಮಧುಶ್ರೀ ಅವರ ವಿವಾಹ ಗುರುವಾರ ನಡೆದಿತ್ತು. ವಿವಾಹದ ನಂತರ ನೂತನ ದಂಪತಿ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !