ಶುಕ್ರವಾರ, ಫೆಬ್ರವರಿ 3, 2023
18 °C

52 ದ್ರಾಕ್ಷಿ ಗಿಡ ಕತ್ತರಿಸಿದ ದುಷ್ಕರ್ಮಿಗಳು: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ (ಬೆಂ.ಗ್ರಾಮಾಂತರ):  ಹೋಬಳಿಯ ಹಾರೋಹಳ್ಳಿ ರೈತ ರಘುನಂದನ್ ಎಂಬುವರಿಗೆ ಸೇರಿದ ದ್ರಾಕ್ಷಿ ತೋಟದಲ್ಲಿನ 52 ಗಿಡಗಳನ್ನು ಸೋಮವಾರ ದುಷ್ಕರ್ಮಿಗಳು ಕತ್ತರಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಗ್ರಾಮದಲ್ಲಿ ಇತ್ತೀಚೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಜಮೀನು ಒತ್ತುವರಿ ಕಾರ್ಯಾಚರಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂತಹ ದುಷ್ಕೃತ್ಯ ನಡೆಸಿರಬಹುದೆಂದು ಶಂಕಿಸಿ ಅವರು ಇಲ್ಲಿನ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ರಘುನಂದನ್ ಮಾತನಾಡಿ, ‘ನಾವು ದ್ರಾಕ್ಷಿ ಗಿಡಗಳನ್ನು ನಾಲ್ಕು ವರ್ಷದಿಂದ ಮಕ್ಕಳಂತೆ ಪೋಷಿಸಿದ್ದೆವು. ಪ್ರಾಕೃತಿಕ ವಿಕೋಪದ ನಡುವೆಯೂ ಸಾಲ ಮಾಡಿ ಬೆಳೆಯನ್ನು ರೋಗಗಳಿಂದ ಕಾಪಾಡಿಕೊಂಡು ಬಂದಿದ್ದೆವು. ಇನ್ನೂ 20 ವರ್ಷ ಕಾಲ ಫಸಲು ಕೊಡುತ್ತಿದ್ದವು. ಗಿಡಗಳು ಫ್ರೂನಿಂಗ್ ಮಾಡಬೇಕಾಗಿತ್ತು. ಅಷ್ಟರಲ್ಲಿ ಕತ್ತರಿಸಿದ್ದಾರೆ. ಸುಮಾರು ₹ 5 ಲಕ್ಷ ನಷ್ಟವಾಗಿದೆ’ ಎಂದು
ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.