ಭಾನುವಾರ, ನವೆಂಬರ್ 17, 2019
24 °C

ಸಿಲಿಂಡರ್‌ ಸ್ಫೋಟ– ಚಿನ್ನಾಭರಣ, ಸ್ವತ್ತು ನಾಶ

Published:
Updated:

ದೊಡ್ಡಬಳ್ಳಾಪುರ: ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮನೆಯಲ್ಲಿ ಇಡಲಾಗಿದ್ದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದೆ.

ಹೊಸಹಳ್ಳಿ ಗ್ರಾಮದ ತೇರಿನ ಬೀದಿಯಲ್ಲಿನ ನಾಗರಾಜ್ ಅವರ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಶುಕ್ರವಾರ ರಾತ್ರಿ ಸ್ಫೋಟಗೊಂಡಿದೆ. ಮನೆ ಸಂಪೂರ್ಣ ಹಾನಿಗೀಡಾಗಿದೆ. ಸಂಬಂಧಿಕರ ಮನೆಯಲ್ಲಿ ಮದುವೆ ಇದ್ದ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ. ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸಿಲಿಂಡರ್‌ ಸ್ಫೋಟಿಸಿದ್ದರಿಂದ ಮನೆಯಲ್ಲಿಡಲಾಗಿದ್ದ ಸುಮಾರು ₹ 1.40ಲಕ್ಷ ಮೌಲ್ಯದ ಚಿನ್ನಭರಣ, ಮದುವೆಗಾಗಿ ಇಡಲಾಗಿದ್ದ ₹1.20 ಲಕ್ಷಕ್ಕೂ ಹೆಚ್ಚಿನ ನಗದು, ಜಮೀನು, ವಿಧ್ಯಾಭ್ಯಾಸ, ಪಡಿತರ ಚೀಟಿ ಸೇರಿದಂತೆ ಇತರೆ ದಾಖಲೆ ಪತ್ರಗಳು ಬೆಂಕಿಗೆ ಆಹುತಿಯಾಗಿವೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಟಿ.ಎಸ್‌.ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ ಇದ್ದರು. ಹೊಸಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪ್ರತಿಕ್ರಿಯಿಸಿ (+)