ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬಸ್ ಪೇಟೆ: ಕೈಕೊಟ್ಟ ಮಳೆ, ಬಾಡುತ್ತಿದೆ ಬೆಳೆ

Last Updated 31 ಆಗಸ್ಟ್ 2020, 6:35 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಪ್ರಸಕ್ತ ಸಾಲಿನ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಇಲ್ಲಿನ ರೈತರು ಖುಷಿಯಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಆದರೆ ಈಗ ಕೆಲವು ದಿನಗಳಿಂದ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿದ್ದು ರೈತರು ಆಕಾಶದತ್ತ ಮುಖ ಮಾಡಿದ್ದಾರೆ.

ಸೋಂಪುರ ಹೋಬಳಿಯು ಮಳೆಯಾಧಾರಿತ ಪ್ರದೇಶವಾಗಿದ್ದು, ಬಹುತೇಕ ರೈತರು ಮುಂಗಾರು ಹಂಗಾಮಿನಲ್ಲಿ ತೊಗರಿ, ಮುಸುಕಿನ ಜೋಳ, ಅವರೆ, ಅಲಸಂದೆ, ನೆಲಗಡಲೆ ಹಾಗೂ ರಾಗಿಯನ್ನು ಬೆಳೆಯುತ್ತಾರೆ. ವರ್ಷದ ಆರಂಭದಲ್ಲೇ ಉತ್ತಮ ಮಳೆ ಬಿದ್ದರಿಂದ ಭೂಮಿ ಪಾಳು ಬಿಡದೆ ವಿವಿಧ ಬೆಳೆಗಳನ್ನು ಬಿತ್ತಿದ್ದರು. ಬಿತ್ತಿದ ಬೆಳೆಗಳು ಹಸಿರು ತುಂಬಿ ಬೆಳೆದು ನಿಂತಿದೆ.

ಮೊದಮೊದಲು ಮಳೆಯೂ ಕಾಲಕಾಲಕ್ಕೆ ಬಂದಿದ್ದರಿಂದ ರೈತರು ಹಾಗೂ ಯುವಕರು ಖುಷಿಪಡುವುದರ ಜೊತೆಗೆ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದರು. ಆದರೆ ಈಗ 15-20 ದಿನಗಳಿಂದ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿವೆ.

‘ಹಲವು ವರ್ಷಗಳಿಂದಲೂ ಈ ಭಾಗದಲ್ಲಿ ಸರಿಯಾಗಿ ಮಳೆ ಇಲ್ಲದೆ ಅಂತರ್ಜಲದ ಮಟ್ಟ ಕುಸಿದಿದೆ. ರೈತರು ಸಾಲ ಮಾಡಿ ಕೊಳವೆ ಬಾವಿಗಳನ್ನು ಕೊರೆಸಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಮಳೆ ಆಗಾಗ ಕೈಕೊಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದರು ಕೃಷಿಕ ರಂಗನಾಥ್.

‘ಹೂ ಬಿಡುವ ಹೀಚು ಕಚ್ಚುವ ಹಂತದಲ್ಲಿ ಭೂಮಿಯಲ್ಲಿ ತೇವಾಂಶ ಇರಬೇಕು. ಭೂಮಿಯ ಮೇಲ್ಪದರದಲ್ಲಿ ತೇವಾಂಶ ಇಲ್ಲದೇ ಹೋದರೆ ಬೆಳೆಗಳು ಒಣಗುವ ಜೊತೆಗೆ ಹೂ, ಹೀಚು ಸರಿಯಾಗಿ ಕಚ್ಚದೇ ಫಸಲು ಕಡಿಮೆಯಾಗುತ್ತದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ರೈತ ಹನುಮಂತರಾಯಪ್ಪ.

‘ಕೆರೆ, ಕುಂಟೆಗಳು, ರಾಜಕಾಲುವೆಗಳನ್ನು ಹೂಳೆತ್ತಿ, ಸರಿಪಡಿಸಿ ಮಳೆಗಾಲದಲ್ಲಿ ತುಂಬಿಸಬೇಕು. ಅದರಿದ ರೈತರಿಗೂ ಅನುಕೂಲವಾಗಲಿದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT