₹12 ಲಕ್ಷ ದೋಚಿ ಪರಾರಿ

7

₹12 ಲಕ್ಷ ದೋಚಿ ಪರಾರಿ

Published:
Updated:

ದೊಡ್ಡಬಳ್ಳಾಪುರ: ಆಸ್ಪತ್ರೆಗೆ ಹಣ ಪಾವತಿ ಮಾಡಲು ನಗರದ ಬೆಸೆಟ್‌ ಪಾರ್ಕ್‌ ಸಮೀಪದ ಬ್ಯಾಂಕ್‌ ಆಫ್‌ ಬರೋಡ ಬ್ಯಾಂಕಿನಿಂದ ಪಡೆದಿದ್ದ ₹12 ಲಕ್ಷವನ್ನು ನಗರದ ಆದಿತ್ಯ ಪಬ್ಲಿಕ್‌ ಸ್ಕೂಲ್‌ ಸಮೀಪ ಅಪರಿಚಿತರು ಶುಕ್ರವಾರ ಮಧ್ಯಾಹ್ನ ದೋಚಿ ಪರಾರಿಯಾಗಿದ್ದಾರೆ.

ಮಾಚಗೊಂಡನಹಳ್ಳಿ ನಿವಾಸಿ ಮಂಜುನಾಥ್‌ ಅವರು ಆಸ್ಪತ್ರೆಗೆ ಪಾವತಿಸುವ ಸಲುವಾಗಿ ಬ್ಯಾಂಕಿನಿಂದ ಹಣ ಪಡೆದು ಕಾರಿನಲ್ಲಿ ಬಂದಿದ್ದರು. ಶಾಲೆಯ ಬಳಿ ಮಗಳನ್ನು ಕರೆದುಕೊಂಡು ಹೋಗಲು ಕಾರಿನಲ್ಲಿ ಕುಳಿತಿದ್ದರು. ಆಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಬಲವಂತವಾಗಿ ಕಾರಿನ ಬಾಗಿಲು ತೆಗೆದು ಮಂಜುನಾಥ ಅವರನ್ನು ಕಾರಿನ ಒಳಗೆ ತಳ್ಳಿ ಹಣದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಎಚ್ಚೆತ್ತ ನಗರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ನಡೆದ ಪ್ರದೇಶದಲ್ಲಿನ ಹಾಗೂ ಬ್ಯಾಂಕ್‌ನಲ್ಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !