ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕು ಪತ್ರ ನೀಡಲು ಮನವಿ   

Last Updated 16 ಡಿಸೆಂಬರ್ 2018, 13:35 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಮನೆ, ನಿವೇಶನ ಇಲ್ಲದ ಬಡ ಕುಟುಂಬಗಳಿಗೆನಗರಸಭೆ ವ್ಯಾಪ್ತಿಯ ಸರ್ವೇ ನಂಬರ್ 47/1 ರಲ್ಲಿನ ಸರ್ಕಾರಿ ಭೂಮಿಹಂಚಿಕೆ ಮಾಡಬೇಕು ಎಂದು ರಾಜೀವ್ ಗಾಂಧಿ ಆಶ್ರಯಬಡಾವಣೆಯಲ್ಲಿನ ಮುಖಂಡರಾದ ಎಸ್.ಸಿದ್ದರಾಜು, ಸನಾಉಲ್ಲಾ, ಡಿ.ಎಸ್.ಸುಬ್ರಮಣಿ, ಜೆಡಿಎಸ್ ಕಾರ್ಮಿಕ ಘಟಕದ ನಗರ ಅಧ್ಯಕ್ಷ ಡಿ.ಎನ್. ಹನುಮಂತಪ್ಪ ಮನವಿ ಮಾಡಿದ್ದಾರೆ.

ರಾಜೀವ್ ಗಾಂಧಿ ಆಶ್ರಯ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಮನೆಗಳಲ್ಲಿ ವಾಸವಾಗಿದ್ದ 450 ಕುಟುಂಬಗಳಿಗೆ ನಗರಭೆ ವತಿಯಿಂದ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ಉಳಿದ 44 ಜನರಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಈ ಮನೆಗಳಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಟಡೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಆಶ್ರಯ ಬಡಾವಣೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಗರಸಭೆ ಪೌರಾಯುಕ್ತ ಸಿ.ಮಂಜುನಾಥ್, ‘ಇಲ್ಲಿನ ಸ್ಥಿತಿಗತಿಗಳ ಕುರಿತು ಹಾಗೂ ಆಶ್ರಯ ಬಡಾವಣೆಗಳಲ್ಲಿನ ಖಾಲಿ ಮನೆಗಳಲ್ಲಿ ಈಗಾಗಲೇ ವಾಸ ಇರುವ ನಿವಾಸಿಗಳ ಬಗ್ಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಪತ್ರ ಬರೆದು ಮಾಹಿತಿ ನೀಡಲಾಗಿದೆ. ನಿವೇಶನ ಅಥವಾ ಮನೆಗಳನ್ನು ಹಂಚಿಕೆ ಮಾಡುವ ಕುರಿತಂತೆ ನಿಯಮಾನುಸಾರ ಮಾರ್ಗದರ್ಶನ ಮಾಡುವಂತೆ ಕೋರಲಾಗಿದೆ. ನಿಗಮದಿಂದ ಮಾಹಿತಿ ಬಂದ ಕೂಡಲೇ ಹಕ್ಕುಪತ್ರ ಅಥವಾ ನಿವೇಶನಗಳ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT