ದೇವನಹಳ್ಳಿ: ನಗರದ ಪರ್ವತಪುರ ರಸ್ತೆಯಲ್ಲಿರುವ ಬನಶಂಕರಿ ಐಟಿಐ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಡಾ.ಶಿವಕುಮಾರ ಸ್ವಾಮೀಜಿ ಹಾಗೂ ಪ್ರಥಮ ಕವಯತ್ರಿ ಅಕ್ಕಮಹಾದೇವಿ ಜಯಂತಿ ನಡೆಯಿತು.

ಅಕ್ಕಮಹಾದೇವಿ ಅವರು ಮಹಿಳಾ ಸ್ವಾತಂತ್ರ್ಯ, ಆತ್ಮಸಾಕ್ಷಾತ್ಕಾರ ಮತ್ತು ಭಕ್ತಿಯ ಪ್ರತೀಕ. ಅವರ ವಚನಗಳಲ್ಲಿ ವ್ಯಕ್ತವಾಗುವ ಧೈರ್ಯ ಮತ್ತು ವೈರಾಗ್ಯ ಇಂದಿಗೂ ಸಮಾಜಕ್ಕೆ ದಾರಿ ತೋರಿಸುವ ಬೆಳಕು. ಅಕ್ಕನವರ ಸಾಹಿತ್ಯವು ಕೇವಲ ಭಕ್ತಿಯಲ್ಲ, ಅದು ಜೀವನದ ಸತ್ಯವನ್ನು ಅರಿಯುವ ಸಾಧನವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್. ಕೃಷ್ಣಪ್ಪ ಹೇಳಿದರು.

ಡಾ.ಶಿವಕುಮಾರ ಸ್ವಾಮೀಜಿ ಅವರು ಕೇವಲ ಧಾರ್ಮಿಕ ಗುರುಗಳಷ್ಟೇ ಅಲ್ಲ, ಅವರು ನಾಡಿನ ಸಾಮಾಜಿಕ ಪರಿವರ್ತನೆಯ ಶಿಲ್ಪಿ. ಅನಾಥರು, ಬಡವರು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಆಶ್ರಯ, ಅನ್ನ ಮತ್ತು ಶಿಕ್ಷಣ ನೀಡುವ ಮೂಲಕ ಅವರು ಬದುಕಿನ ಸಾರ್ಥಕತೆಯನ್ನು ತೋರಿಸಿದರು. ‘ಸೇವೆಯೇ ಸಾಧನೆ’ ಎಂಬ ತತ್ವವನ್ನು ತಮ್ಮ ಜೀವನದ ಮೂಲಕ ಸಾರಿದ ಮಹನೀಯರು ಎಂದು ಹೇಳಿದರು.

ಇಂದಿನ ಯುವಜನತೆ ಸ್ವಾಮೀಜಿಯವರ ಸರಳತೆ, ಶಿಸ್ತು ಮತ್ತು ಸೇವಾಭಾವವನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಮಾನವೀಯತೆ ಉಳಿಯಬೇಕಾದರೆ, ಇಂತಹ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಜಾರಿಗೊಳಿಸುವುದು ಅಗತ್ಯ ಎಂದರು.

ಡಾ.ಶಿವಕುಮಾರ ಸ್ವಾಮೀಜಿ ಅವರು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನದಾನ ಮತ್ತು ವಿದ್ಯಾದಾನ ಮಾಡಿದ ಅಪೂರ್ವ ದಾತರು. ಅವರ ಸೇವೆ ನಾಡಿನ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದು ಲೇಖಕ ಶರಣಯ್ಯ ಹಿರೇಮಠ ಸ್ಮರಿಸಿದರು.

ಲಯನ್ಸ್ ಕ್ಲಬ್ನ ನಿಕಟಪೂರ್ವ ಅಧ್ಯಕ್ಷರೂ ಆದ ಸಿ.ಪಿ.ಎನ್. ರೆಡ್ಡಿ ಅವರು ಕನ್ನಡ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ರಂಗು ತುಂಬಿದರು.

ಜಿಲ್ಲಾ ಕಸಾಪ ಕೋಶಾಧ್ಯಕ್ಷ ಡಾ.ಎಂ. ಮುನಿರಾಜು, ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್, ಪ್ರಾಂಶುಪಾಲ ಎಸ್. ರಮೇಶ್ ಕುಮಾರ್, ಸಹ ಕಾರ್ಯದರ್ಶಿ ಶಿವರಾಮ್, ಉಪನ್ಯಾಸಕರಾದ ಶಿವಕುಮಾರ್, ಕನ್ನಡಿಗ ಬಿದಲೂರು ಶಿವಕುಮಾರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-15-153382533

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.