ದೇವನಹಳ್ಳಿ: ತಾಲ್ಲೂಕಿನ ಬೊಮ್ಮವಾರ, ತಿಂಡ್ಲು, ಸಾವಕನಹಳ್ಳಿ, ಮಾಳಿಗೇನಹಳ್ಳಿ ಹಾಗೂ ಶ್ಯಾನವನಹಳ್ಳಿಗಳಲ್ಲಿ ಭಾನುವಾರ ಒಕ್ಕಲಿಗ ಸಮುದಾಯದವರಿಂದ ಬಂಡಿ ದ್ಯಾವರ, ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದೇವತೆ ಆರಾಧನೆಗೆ ವಿಶೇಷವಾದ ಈ ಕರಗ ಮಹೋತ್ಸವವನ್ನು ಒಕ್ಕಲಿಗರು 20 ವರ್ಷಕ್ಕೊಮ್ಮೆ ಆಚರಿಸುವುದು ವಿಶೇಷ. ಸಂಪ್ರದಾಯದಂತೆ ಬಂಡಿಯನ್ನು ಅಲಂಕರಿಸಿ, ದೇವರ ಉತ್ಸವ ಮೂರ್ತಿಯನ್ನು ಅದರಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಶಕ್ತಿ ದೇವತೆ ಸಂಕೇತವಾದ ಹೂವಿನ ಕಳಸ ತಲೆ ಮೇಲೆ ಹೊತ್ತು ಸಾಗುವ ಕರಗ ಮೆರವಣಿಗೆ ಭಕ್ತರ ಗಮನ ಸೆಳೆಯಿತು.

ಬೊಮ್ಮವಾರ ಗ್ರಾಮದಲ್ಲಿ 97 ಗೌಡ ಕುಟುಂಬಗಳು, ತಿಂಡ್ಲು ಗ್ರಾಮದಲ್ಲಿ 35 ಕುಟುಂಬಗಳು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರು ಸಂಪ್ರದಾಯಬದ್ಧವಾಗಿ ಹಬ್ಬವನ್ನು ಆಚರಿಸಿದರು.

ಒಕ್ಕಲಿಗ ಮುಖಂಡ ಸೋಮಶೇಖರ್ ಮಾತನಾಡಿ, ‘1985 ಮತ್ತು 2006ರಲ್ಲಿ ನಡೆದಿದ್ದ ಬಂಡಿದೇವರ ಮಹೋತ್ಸವವನ್ನು ಈ ವರ್ಷ ಮತ್ತೆ ಆಚರಿಸುತ್ತಿದ್ದೇವೆ. ಬೊಮ್ಮವಾರದಿಂದ ಶೆಟ್ಟರಹಳ್ಳಿ ಗಡಿವರೆಗೆ ಮೆರವಣಿಗೆ ನಡೆಯಲಿದೆ. ಸುಮಾರು 60ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ’ ಎಂದರು.

ಜನಸಂದಣಿ ನಿಯಂತ್ರಣಕ್ಕಾಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮ ಗಡಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ವೇಳೆ 2–3 ಸಾವಿರ ಜನರಿಗೆ ಊಟ ವ್ಯವಸ್ಥೆ ಮಾಡಲಾಗಿದೆ.

ಈ ಮಹೋತ್ಸವವು ‘ಹೊಸದ್ಯಾವರು’, ‘ಬಂಡಿದ್ಯಾವರು’, ‘ಬೆಟ್ಟಾಡು’ ಸಂಸ್ಕೃತಿ ವೈಶಿಷ್ಟ್ಯತೆಯನ್ನು ಪ್ರತಿಬಿಂಬಿಸಿತು.

ಮಹೋತ್ಸವದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಕೃಷ್ಣ ಭೈರೇಗೌಡ, ಮಾಜಿ ಶಾಸಕರಾದ ಜಿ.ಚಂದ್ರಣ್ಣ, ಎಲ್.ಎನ್.ನಾರಾಯಣ ಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.

ಮುಖಂಡರಾದ ಎಸ್.ಪಿ.ಮುನಿರಾಜ್, ಅಂಬರೀಶ್ ಗೌಡ, ಕೆ.ವಿ.ಮಂಜುನಾಥ್, ಲಕ್ಷ್ಮೀಗೌಡ, ಗೋಪಿನಾಥ್, ಸುಚಿತ್ರ, ಎಸ್.ಮಹೇಶ್, ಮನೋಹರ್, ಟಿ.ರವಿ, ರಮೇಶ್, ದಿನಾಕರ್, ರಾಮಾಂಜಿನಪ್ಪ, ನವೀನ್, ಸುಂದರೇಶ್ ಸೇರಿದಂತೆ ಹಲವರು ಹಾಗೂ ವಿವಿಧ ಹಳ್ಳಿಗಳ ಒಕ್ಕಲಿಗರು ಮತ್ತು ನಾಗರಿಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-15-1166934013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.