ದೇವನಹಳ್ಳಿ: ಸಮಾನತೆ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸಹೋದರತೆಯನ್ನು ಸಾರಿದ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ‘ಜ್ಞಾನಕ್ಕಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ’ ಎಂದು ಹೇಳುವ ಮೂಲಕ ಯುವಜನರು ಸೇರಿದಂತೆ ಇಡೀ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ತಹಶೀಲ್ದಾರ್ ಎಂ.ಅನಿಲ್ ತಿಳಿಸಿದರು.

ಪಟ್ಟಣದ ಬಿ.ಬಿ. ರಸ್ತೆ ತಾಲ್ಲೂಕು ಆಡಳಿತ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವದಲ್ಲಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ತಾ.ಪಂ ಇಒ ಶ್ರೀನಾಥ್ ಗೌಡ ಮಾತನಾಡಿ, ‘ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರಿಗೆ ಅವರೇ ಸಾಟಿ. ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ನಿರಂತರವಾಗಿ ಪರಿಶ್ರಮಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ತೋರಿಸಿದ ಮಹಾನ್ ಛಲವಾದಿ ಹಾಗೂ ಸ್ವಾಭಿಮಾನಿ ಅವರು’ ಎಂದು ಬಣ್ಣಿಸಿದರು.

ದಲಿತ ಮುಖಂಡ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ‘ಅಂಬೇಡ್ಕರ್ ಅವರು ವಕೀಲ, ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ ಮತ್ತು ರಾಜನೀತಿಶಾಸ್ತ್ರಜ್ಞರಾಗಿದ್ದರು. ಅಲ್ಲದೆ, ಭಾರತದ ಸಂವಿಧಾನ ರಚನೆ ಮಾಡುವ ಮೂಲಕ ‘ಒಂದು ಮತ – ಒಂದು ಮೌಲ್ಯ’, ಮಹಿಳಾ ಮೀಸಲಾತಿ, ಕಾರ್ಮಿಕರ ಅಭಿವೃದ್ಧಿಗೆ ಕಾನೂನಿನಲ್ಲಿ ನೂತನ ತಿದ್ದುಪಡಿ, ಹಾಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸಿದ ಮಹಾನ್ ಚೇತನ ಎಂದು ಸ್ಮರಿಸಿದರು.

ದಸಂಸ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ‘ಅಂಬೇಡ್ಕರ್ ಅವರ ಆದರ್ಶ, ಚಿಂತನೆ ಮತ್ತು ಮುನ್ನೋಟ ಯುವ ಪೀಳಿಗೆಗೆ ದಾರಿದೀಪವಾಗಿದೆ. ಆಡಳಿತ, ಅಭಿವೃದ್ಧಿ ಮತ್ತು ಜನಸೇವೆ ಮೌಲ್ಯಗಳ ಆಧಾರಿತವಾಗಿರಬೇಕ. ಸಮಾಜದ ಪ್ರತಿಯೊಬ್ಬ ಕೊನೆಯ ಪ್ರಜೆಗೂ ಸಾಮಾಜಿಕ ನ್ಯಾಯ ಸೇರಿದಂತೆ ಎಲ್ಲ ಅವಕಾಶಗಳು ಸಮಾನವಾಗಿ ದೊರೆಯಬೇಕೆಂಬುದು ಅವರ ಆಶಯ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ. ಮಂಜುನಾಥ್, ದಸಂಸ ಮುಖಂಡ ನರಸಪ್ಪ, ಕೆಡಿಪಿ ಸದಸ್ಯ ಕೆ.ವಿ. ಸ್ವಾಮಿ, ದಾಸರಬೀದಿ ಮುರಳಿ, ಮಾಜಿ ಪುರಸಭಾ ಸದಸ್ಯರಾದ ಎಂ. ಮೂರ್ತಿ, ಸುರೇಶ್, ಜಾಲಿಗೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎಂ.ಆನಂದ್ ಕುಮಾರ್, ಮಾದಿಗ ದಂಡೋರದ ಮಾರಪ್ಪ, ವೆಂಕಟೇಶ್ ಎಂ, ಅಣ್ಣೇಶ್ವರ ಗ್ರಾಪಂ ಮಾಜಿ ಉಪಾಧ್ಯಕ್ಷ ಮುನಿರಾಜಪ್ಪ, ಕ್ರೀಡಾಪಟು ವೇಣುಗೋಪಾಲ್, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-15-155601883

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.