ದೇವನಹಳ್ಳಿ: ಇಲ್ಲಿಯ ಬೀರಸಂದ್ರದ ಜಿಲ್ಲಾಡಳಿತ ಭವನದ ಎದುರು ನಿರ್ಮಾಣವಾಗಿರುವ ಅಮೆಟಿ ಖಾಸಗಿ ಯೂನಿವರ್ಸಿಟಿ ಹಾಗೂ ಹಾರೋ ಇಂಟರ್ನ್ಯಾಷನ್ ಖಾಸಗಿ ಶಾಲೆ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಇದೇ ಆ.28ರಂದು ದೇವನಹಳ್ಳಿ ತಹಶೀಲ್ದಾರ್ಗೆ ಅಧಿಕಾರ ನೀಡಿ, ಆದೇಶ ಹೊರಡಿಸಿದ್ದಾರೆ.

ಆದರೆ, ಒತ್ತುವರಿ ತೆರವಿಗೆ ತೆರಳಿದ್ದ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಗೇಟ್ನಲ್ಲಿಯೇ ನಿಲ್ಲಿಸಿ, ವಾಪಸ್ ಕಳಿಸಲಾಗಿತ್ತು. ಅದಾದ ನಂತರ ತಾಲ್ಲೂಕು ಆಡಳಿತ ಇನ್ನೂ ತೆರವು ಕಾರ್ಯಾಚರಣೆ ಆರಂಭಿಸಿಲ್ಲ.

ಸಾರ್ವಜನಿಕ ರಸ್ತೆ, ಕಾಲುವೆ ಮತ್ತು ಗೋಮಾಳ ಜಾಗ ಒತ್ತುವರಿ ಮಾಡಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಯೊಂದು ಕಟ್ಟಡ ನಿರ್ಮಿಸುತ್ತಿದೆ ಎಂದು ಬೀರಸಂದ್ರ ಗ್ರಾಮಸ್ಥರು ಎರಡು ವರ್ಷಗಳ ಹಿಂದೆಯೇ ದೂರು ಸಲ್ಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸರ್ವೇ ನಡೆಸಿ, ಜಿಲ್ಲಾಡಳಿತಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು. ಸರ್ಕಾರಕ್ಕೆ ಸೇರಿರುವ ಕೋಟ್ಯಂತರ ರೂಪಾಯಿ ಮೌಲ್ಯದ 5 ಎಕರೆ 20 ಗುಂಟೆ ಭೂಮಿಯನ್ನು ಅತಿಕ್ರಮಿಸಿಕೊಂಡು ವಿಶ್ವವಿದ್ಯಾಲಯ ಮತ್ತು ಶಾಲೆ ಕಟ್ಟಡ ನಿರ್ಮಿಸಲಾಗಿದೆ ಎಂದು ವರದಿ ಹೇಳಿದೆ.

ವಿಶ್ವವಿದ್ಯಾಲಯ ಮತ್ತು ಶಾಲೆ ಕಟ್ಟಡ ನಿರ್ಮಾಣಕ್ಕೆ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿಲ್ಲ. ಅಲ್ಲದೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ (ಪಿಡಿಒ) ಪಡೆಯಬೇಕಿದ್ದ ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರವನ್ನು ಹಿಂದಿನ ಅಧ್ಯಕ್ಷೆ ಗೌರಮ್ಮ ರಾಜಣ್ಣ ಅವರಿಂದ ಪಡೆಯಲಾಗಿದೆ. ಇದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಅಧಿನಿಯಮಕ್ಕೆ ವಿರುದ್ಧವಾಗಿದೆ ಎಂಬುದು ಸ್ಥಳೀಯರ ದೂರು.

ಶಾಲೆ ಪ್ರಾರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿರುವ ಹಾರೋ ಇಂಟರ್ ನ್ಯಾಷನ್ ಶಾಲೆ ಆದೂರು ದುದ್ದನಹಳ್ಳಿ ಗ್ರಾ.ಪಂ ಕಚೇರಿಯ ನಕಲಿ ದಾಖಲೆ, ಕೇವಲ ಕೆಳ ಅಂತಸ್ತಿನ ಐದು ಕೊಠಡಿಗಳಿಗೆ ಮಾತ್ರವೇ ಅಗ್ನಿ ಶಾಮಕ ದಳ ನೀಡಿರುವ ನಿರಾಪೇಕ್ಷಣ ಪತ್ರ (ಎನ್ಒಸಿ) ನೀಡಿದಿದೆ. ಅದನ್ನು ಸರಿಯಾಗಿ ಪರಿಶೀಲಿಸದೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ.

ಲೋಕೋಪಯೋಗಿ ಇಲಾಖೆಯೂ ಶಾಲಾ ಕಟ್ಟಡದ ಸ್ಥಿರತೆ ಪ್ರಮಾಣ ಪತ್ರ ನೀಡಲು ಸೇವಾ ಸಿಂಧುವಿನ ಮೂಲಕ ಆನ್ಲೈನ್ನಲ್ಲಿ ಕಡತ ಸ್ವೀಕಾರ ಮಾಡಿದೆ. ಎಲ್ಲಾ ಕಡತವನ್ನೂ ಆಫ್ಲೈನ್ನಲ್ಲಿ ನಿರ್ವಹಣೆ ಮಾಡಲಾಗಿದೆ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಯೂ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ವಿಚಾರ ಗಮನದಲ್ಲಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಒತ್ತುವರಿ ತೆರವಿಗೆ ನಿರ್ದೇಶನ ನೀಡಲಾಗುವುದು.

–ಕೃಷ್ಣ ಬೈರೇಗೌಡ ಕಂದಾಯ ಸಚಿವ

ದೊಡ್ಡಬಳ್ಳಾಪುರ ಉಪವಿಭಾಗಾದಿಕಾರಿಗಳ ವರದಿಯ ಆಧಾರದಲ್ಲಿ ಬೀರಸಂದ್ರ ಆಲೂರು ದುದ್ದನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸಲು ದೇವನಹಳ್ಳಿ ತಹಶೀಲ್ದಾರ್ ಅವರಿಗೆ ಆದೇಶ ಮಾಡಲಾಗಿದೆ.

–ಎನ್.ಶಿವಶಂಕರ ಜಿಲ್ಲಾಧಿಕಾರಿ

ಅಕ್ರಮ–ಸಕ್ರಮ ಮಾಡಿಕೊಂಡು ಬಹುಕೋಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ಲೂಟಿ ಮಾಡುವ ಮುನ್ನ ಸಾರ್ವಜನಿಕ ಉಪಯೋಗಕ್ಕೆ ಇದ್ದ ರಸ್ತೆ ಮತ್ತು ಗೋಮಾಳ ಉಳಿಸಬೇಕು

– ಬಿ.ಆರ್.ಮೋಹನ್ ಬೀರಸಂದ್ರ

ಅಮೆಟಿ ಹಾರೋ ಇಂಟರ್ ನ್ಯಾಷನಲ್ ಶಾಲೆ ಸ್ಥಾಪನೆ ಸಂಬಂಧ ಉಪನಗರ ಹೊರವರ್ತುಲ ರಸ್ತೆ ಯೋಜನಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದಾಗ ಸರ್ಕಾರಿ ಭೂಮಿ ಕಬಳಿಸುವ ಕುರಿತು ತಕರಾರು ಸಲ್ಲಿಸಿದ್ದರೂ ಅದನ್ನು ಪರಿಗಣಿಸಿಲ್ಲ

–ಅಭಿಷೇಕ್ ಗೌಡ ವಕೀಲರು

ಆರೋಪಗಳಿಗೆ ಉತ್ತರಿಸದ ಮಾತೃ ಸಂಸ್ಥೆ ಅಮೇಟಿ ವಿಶ್ವವಿದ್ಯಾಲಯ ಮತ್ತು ಹಾರೋ ಇಂಟರ್ನ್ಯಾಷನಲ್ ಶಾಲೆಯ ಅಕ್ರಮ ಕುರಿತು ಪ್ರತಿಕ್ರಿಯೆಗಾಗಿ ಮಾತೃ ಸಂಸ್ಥೆ ‘ರಿಟ್ನಂದ್ ಬಾಲ್ವೆಡ್ ಎಜುಕೇಷನ್ ಫೌಂಡೇಶನ್’ ಮುಖ್ಯಸ್ಥರಿಗೆ ಇ-ಮೇಲ್ ಮೂಲಕ ಸಂದೇಶ ಕಳಿಸಲಾಗಿತ್ತು. ಆದರೆ ಈ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.