ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಕಟ್ಟಡಕ್ಕೆ ಚಪ್ಪಲಿ ಹಾರ! ಹಬ್ಬಕ್ಕೆ ಬೋನಸ್ ನೀಡಲಿಲ್ಲ ಎಂದು ನೌಕರ ಕೃತ್ಯ

Last Updated 3 ಅಕ್ಟೋಬರ್ 2022, 21:12 IST
ಅಕ್ಷರ ಗಾತ್ರ

ದೇವನಹಳ್ಳಿ: ಪ್ರತಿ ವರ್ಷದಂತೆ ದಸರಾ ಹಬ್ಬಕ್ಕೆ ಸಮವಸ್ತ್ರ, ಬೋನಸ್‌ ನೀಡಲಿಲ್ಲ ಎಂದು ಬೇಸರಗೊಂಡ ಆವತಿ ಪಂಚಾಯಿತಿಯ ಸಿಬ್ಬಂದಿಯೊಬ್ಬ ಭಾನುವಾರ ರಾತ್ರಿ ಪಂಚಾಯಿತಿ ಕಟ್ಟಡಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆಸ್ಥಳಕ್ಕೆ ಧಾವಿಸಿದ ತಾಲ್ಲೂಕು ಪಂಚಾಯಿತಿ ಅಧಿಕಾರಿ ಸುನೀಲ್‌ ಕೂಡಲೇ ಚಪ್ಪಲಿ ಹಾರವನ್ನು ತೆಗೆಸಿದ್ದಾರೆ. ಕಚೇರಿಯ ಸಿಸಿಟಿವಿ ಪರಿಶೀಲಿಸಿದಾಗ ಆವತಿ ಗ್ರಾ.ಪಂ. ಸ್ವಚ್ಛತಾ ಕೆಲಸಗಾರ ಕೃಷ್ಣಪ್ಪ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.ನಂತರ ಆತನನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ.

‘ಪ್ರತಿ ವರ್ಷದಂತೆ ಈ ಬಾರಿ ಬೋನಸ್‌ ಹಾಗೂ ಸಮವಸ್ತ್ರ ನೀಡಲಿಲ್ಲ. ಇದರಿಂದ ನಾನು ಕುಡಿದ ಮತ್ತಿನಲ್ಲಿ ಈ ರೀತಿ ಮಾಡಿದ್ದೇನೆ. ಮತ್ತೊಮ್ಮೆ ಆಗದಂತೆ ನೋಡಿಕೊಳ್ಳುತ್ತೇನೆ ಕ್ಷಮಿಸಿ' ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ.

ಆವತಿ ಗ್ರಾಮ ಪಂಚಾಯಿತಿ ಪಿಡಿಒ ಶಿವರಾಜ್‌ ವಿಜಯಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ದೂರು ಪರಿಶೀಲಿಸಿ ಗಂಭೀರವಲ್ಲದ ಕೃತ್ಯವೆಂದು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT