ದೇವನಹಳ್ಳಿ: ಮೌಕ್ತಿಕಾಂಬ ಅಮ್ಮನವರ ಕರಗ ಮಹೋತ್ಸವ ಅಂಗವಾಗಿ ಶನಿವಾರ ಮುಂಜಾನೆ ಪಟ್ಟಣದ ಬೀದಿಗಳು ಹೂವಿನ ಹೊದಿಕೆಯಿಂದ ಕಂಗೊಳಿಸಿ ಭಕ್ತಿ ವೈಭವ ಮೆರೆದವು.

ಕರಗ ಮೆರವಣಿಗೆಯಲ್ಲಿ ಪೂಜಾರಿ ಉಮೇಶ್ ಕರಗವನ್ನು ಹೊತ್ತು ಸಾಗಿದ ವೇಳೆ ಹೂವಿನ ಹೊದಿಕೆಯ ಮೇಲೆ ನೃತ್ಯ ಪ್ರದರ್ಶಿಸಿದರು. ವೀರಕುಮಾರರು ‘ಗೋವಿಂದಾ’ ನಾಮಸ್ಮರಣೆಯೊಂದಿಗೆ ಮೆರವಣಿಗೆಗೆ ಚೈತನ್ಯ ತುಂಬಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತರು ಲಕ್ಷಾಂತರ ರೂಪಾಯಿ ಮೌಲ್ಯದ ಹೂಗಳಿಂದ ರಂಗೋಲಿ ಹಾಕಿ ಕರಗವನ್ನು ಸ್ವಾಗತಿಸಿದರು.

ಮಹಿಳೆಯರು ಮನೆಗಳ ಮುಂಭಾಗದಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಿ ಹೂಗಳಿಂದ ಅಲಂಕರಿಸಿ ಕರಗಕ್ಕೆ ಸ್ವಾಗತ ಕೋರಿದರು. ದೇವಾಲಯದ ಒಳಹೊರ ಭಾಗಗಳನ್ನು ಹಣ್ಣು ಮತ್ತು ಹೂಗಳಿಂದ ಅಲಂಕರಿಸಲಾಗಿದ್ದು, ಭಕ್ತರ ದಂಡು ಹರಿದುಬಂತು. ವಿವಿಧೆಡೆ ಅನ್ನಸಂತರ್ಪಣೆ ನಡೆಯಿತು.

ಕರಗ ವೀರಕುಮಾರರ ಘರ್ಜನೆ ಹಾಗೂ ಭಕ್ತರ ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ನಡೆಯಿತು. ಬೆಂಗಳೂರಿನ ಕರಗದ ನಂತರ ದೇವನಹಳ್ಳಿ ಕರಗಕ್ಕೂ ಪುರಾತನ ಪರಂಪರೆ ಇದೆ ಎಂದು ತಿಳಿದುಬರುತ್ತದೆ.

ಕರಗದ ಪೂಜಾರಿ ಉಮೇಶ್ ಎರಡನೇ ಬಾರಿ ಕರಗ ಹೊತ್ತು ನೃತ್ಯ ಪ್ರದರ್ಶಿಸಿದರು. ಮಧ್ಯರಾತ್ರಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಬಳಿಕ ಕರಗವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗ್ಗೆ ಮತ್ತೆ ದೇವಾಲಯಕ್ಕೆ ವಾಪಸ್ಸಾಯಿತು. ಮಾರ್ಗಮಧ್ಯೆ ಭಕ್ತರು ಮಲ್ಲಿಗೆ ಹೂ ಅರ್ಪಿಸಿ ಭಕ್ತಿ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-15-945964739

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.