ದೇವನಹಳ್ಳಿ: ತಾಲ್ಲೂಕಿನ ಬೈಚಾಪುರ, ಸಣ್ಣ ಅಮಾನಿಕೆರೆ, ಪ್ರಸನ್ನಹಳ್ಳಿ ಗ್ರಾಮಗಳ ಹಲವು ಸರ್ವೆ ನಂಬರ್ಗಳ ಪಹಣಿಯಲ್ಲಿ ಖಾತೆದಾರ ರೈತರ ಹೆಸರನ್ನು ಉಪವಿಭಾಗಾಧಿಕಾರಿ ಕಚೇರಿಯಿಂದ ಬದಲಾಯಿಸಿರುವ ನಕಲಿ ಆದೇಶಗಳು ರೈತರನ್ನು ಅತಂತ್ರದಲ್ಲಿ ಸಿಲುಕಿಸಿವೆ.

ಈ ಬೆಳವಣಿಗೆಯ ನಂತರ ತಾಲ್ಲೂಕಿನ ರೈತರು ತಮ್ಮ ಜಮೀನುಗಳು ತಮ್ಮ ಹೆಸರಿನಲ್ಲಿಯೇ ಇವೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸಿಕೊಳ್ಳುತ್ತಿದ್ದಾರೆ.

ಉಳುವವನೇ ಭೂಮಿ ಒಡೆಯ (ಎಲ್ಆರ್ಎಫ್) ಬೋಗಸ್ ದಾಖಲೆಗಳು ದೇವನಹಳ್ಳಿ ತಾಲ್ಲೂಕು ಕಚೇರಿಯ ರೇಕಾರ್ಡ್ ರೂಂಗೆ ಸೇರಿಸಿದ್ದು ಯಾರು? ಭೂ ಸುರಕ್ಷಾ ಯೋಜನೆಯಲ್ಲಿ ನಕಲಿ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಅಸಲಿಯ ಮುದ್ರೆ ಹಾಕಿರುವ ಹಿಂದಿರುವ ಸಂಘಟಿತ ಅಪರಾಧದ ‘ಕಿಂಗ್ಪಿನ್’ಗಳು ಯಾರು? ಇವರನ್ನೆಲ್ಲ ರಾಜ್ಯ ಸರ್ಕಾರ ಹುಡುಕಿ ಶಿಕ್ಷಿಸುವುದೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.

ರಾಜ್ಯದ ವಿವಿಧೆಡೆ ಕಂದಾಯ ದಾಖಲೆಗಳನ್ನು ಮಾತ್ರ ತಿದ್ದುತ್ತಿದ್ದ ಉದಾಹರಣೆಗಳು ಸಾಕಷ್ಟು ಬಾರಿ ಕೇಳಿಬಂದಿತ್ತು. ಆದರೆ, ದೇವನಹಳ್ಳಿಯ ಪ್ರಕರಣದಲ್ಲಿ ನ್ಯಾಯಾಂಗಕ್ಕೆ ಅವಮಾನ ಮಾಡುವಂತೆ ಹೈಕೋರ್ಟ್ ಮತ್ತು ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ(ಕೆಎಟಿ) ಹೆಸರಲ್ಲಿ ನಕಲಿ ಆದೇಶ ಸೃಷ್ಟಿಸಿರುವುದು ನ್ಯಾಯ ವ್ಯವಸ್ಥೆಯ ಮೇಲೆ ಶ್ರೀ ಸಾಮಾನ್ಯರೂ ಹೊಂದಿರುವ ನಂಬಿಕೆಗೆ ಅಪಚಾರ ಎಸಗಿದಂತಾಗಿದೆ.

ಅನಾಮಿಕ ವ್ಯಕ್ತಿಗಳು ಉಪವಿಭಾಗಾಧಿಕಾರಿ(ಎ.ಸಿ) ಡಿಜಿಟಲ್ ಸಹಿ ಕಾರ್ಡ್ ಬಳಸಿ ನಕಲಿ ಆದೇಶ ಸೃಷ್ಟಿಸಿದ್ದಾರೆ. ಇದ್ಯಾವುದರ ಪ್ರತಿಗಳೂ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿಲ್ಲ....ಹೀಗಂತ ವರ್ಗಾವಣೆಗೊಂಡಿರುವ ಉಪವಿಭಾಗಾಧಿಕಾರಿ ದುರ್ಗಶ್ರೀ ತರಾತುರಿಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಕಲಿ ಖಾತೆ ಸೃಷ್ಟಿಸಿ ಖಾತೆ ಬದಲಾವಣೆಯ ಅಕ್ರಮವರದಿ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಬೆನ್ನಲ್ಲೇ ರಾತ್ರೋರಾತ್ರಿ ತರಾತುರಿಯಲ್ಲಿ ದೂರು ನೀಡಲಾಗಿದೆ.ಅಕ್ರಮದಿಂದ ಹೊರಬರಲು ಮಾಡಿರುವ ರಕ್ಷಣಾತ್ಮಕ ತಂತ್ರ ಇದು ಎಂದು ರೈತರು ದೂಷಿಸುತ್ತಿದ್ದಾರೆ.

ಕೇವಲ ಒಂದು ಆದೇಶ ಮಾತ್ರ ನಕಲು ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ವಾಸ್ತವದಲ್ಲಿ ಹೈಕೋರ್ಟ್ ಮತ್ತು ಕೆಎಟಿ ನ್ಯಾಯಾಲಯ ಖಾತೆ ಬದಲಾವಣೆಗೆ ಆದೇಶಿಸಿದೆ ಎಂದು ಉಲ್ಲೇಖಿಸಿರುವ 6 ರಿಂದ 8 ಆದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇವುಗಳ ನೈಜತೆ ಕಂಡು ಹಿಡಿಯುವ ಜವಾಬ್ದಾರಿ ಯಾರದು ಎಂಬ ಪ್ರಶ್ನೆ ಕಾಡುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-15-913744804

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.