ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ಮಾಯಸಂದ್ರ ಕೆರೆಯ ಸರ್ಕಾರಿ ಹಳ್ಳ ಹಾಗೂ ರಾಜಕಾಲುವೆ ಸುತ್ತಮುತ್ತಲಿನ ಪ್ರದೇಶವನ್ನು ಆಲಂಕಾರಿಕ ಕಲ್ಲು ಗಣಿಗಾರಿಕೆ ನಡೆಸಲು ಖಾಸಗಿ ಕಂಪನಿಗಳಿಗೆ ಜಿಲ್ಲಾಡಳಿತ 30 ವರ್ಷ ಭೋಗ್ಯಕ್ಕೆ (ಲೀಸ್) ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲಾಡಳಿತದ ಸೂಚನೆಯಂತೆ ನಡೆದ ಜಂಟಿ ಸರ್ವೆ ಕಾರ್ಯದಲ್ಲಿ ಇದು ಬಯಲಾಗಿದೆ. ಸರ್ವೆ ಇಲಾಖೆಯ ಭೂ ಮಾಪಕರು, ಕಂದಾಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಪರಿಶೀಲನೆಯಲ್ಲಿ ಕೆರೆಗೆ ನೀರು ಹರಿಯುವ ನೈಸರ್ಗಿಕ ಹಳ್ಳ ಮತ್ತು ರಾಜಕಾಲುವೆಯ ಮೇಲೆ ಗಣಿಗಾರಿಕೆಗೆ ಅನುಮತಿ ನೀಡಿರುವುದು ದೃಢಪಟ್ಟಿದೆ.

ಗಣಿಗಾರಿಕೆಯಿಂದ ನೀರಿನ ಮೂಲ ನಾಶವಾಗಿವೆ. ರಾಜಕಾಲುವೆ ಸಂಪೂರ್ಣ ಮುಚ್ಚಿಹೋಗಿದ್ದು, ಕೆರೆಗೆ ನೀರು ಹರಿದು ಸೇರುವ ಹಳ್ಳದ ಗುರುತುಗಳೇ ಅಳಿದು ಹೋಗಿರುವುದು ದೇವನಹಳ್ಳಿ ತಹಶೀಲ್ದಾರ್ ಎಂ. ಅನಿಲ್ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ವರದಿಯಲ್ಲಿ ಇದು ಸ್ಪಷ್ಟವಾಗಿದೆ.

ಸರ್ವೆ ನಂ. 40 ಮತ್ತು 63ರಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ನೀರಿನ ಮೂಲ ನಾಶವಾಗಿದೆ ಎಂದು ಅವರು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

‘ಗಣಿಗಾರಿಕೆಗಾಗಿ ಸರ್ಕಾರಿ ರಾಜಕಾಲುವೆ ಮುಚ್ಚಿ, ಪ್ರಕೃತಿ ಸಂಪತ್ತು ದೋಚಲಾಗುತ್ತಿದೆ. ಕೆರೆಗೆ ನೀರು ಹರಿಯುವ ಮಾರ್ಗವನ್ನೇ ಛಿದ್ರಗೊಳಿಸಲಾಗಿದೆ. ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಭಾರತೀಯ ಕಿಸಾನ್ ಸಂಘ ಆಹೋರಾತ್ರಿ ಧರಣಿ ನಡೆಸಲಿದೆ’ ಎಂದು ಸಂಘದ ಅಧ್ಯಕ್ಷ ಶಿವಕುಮಾರ್ ಆರಾಧ್ಯ ಎಚ್ಚರಿಕೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-4-492278509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.