ದೇವನಹಳ್ಳಿ: ಪುರಸಭೆಯ 2026–27ನೇ ಸಾಲಿನ ಆಯವ್ಯಯಕ್ಕೆ ಆಡಳಿತಾಧಿಕಾರಿ ದುರ್ಗಾಶ್ರೀ ಎನ್. ಅನುಮೋದನೆ ನೀಡಿದ್ದು, ₹76 ಲಕ್ಷ ಉಳಿತಾಯದ ಬಜೆಟ್ ರೂಪಿಸಲಾಗಿದೆ. ಪಟ್ಟಣದ ಸಮಗ್ರ ಅಭಿವೃದ್ಧಿ ಮತ್ತು ಪೌರಕಾರ್ಮಿಕರ ಕಲ್ಯಾಣಕ್ಕೆ ಆದ್ಯತೆ ನೀಡಿರುವ ಈ ಬಜೆಟ್ನಲ್ಲಿ ಹಲವು ಮಹತ್ವದ ಯೋಜನೆ ಒಳಗೊಂಡಿದೆ.

ಒಟ್ಟು ₹53.62 ಕೋಟಿ ಆದಾಯ ಮತ್ತು ₹52.86 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಉಳಿತಾಯದೊಂದಿಗೆ ಸಮತೋಲನ ಸಾಧಿಸುವ ಪ್ರಯತ್ನ ಮಾಡಲಾಗಿದೆ. ಪ್ರಾರಂಭಿಕ ಅನುದಾನವಾಗಿ ₹11.10 ಕೋಟಿ ಮೀಸಲಾಗಿದ್ದು, ಸಾಮಾನ್ಯ ನಿಧಿ, ನೀತಿನಿಧಿ, ಉದ್ಯಮ ನಿಧಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ, ತೆರಿಗೆ ಹಾಗೂ ಇತರೆ ಮೂಲಗಳಿಂದ ₹42.52 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ಪೌರಕಾರ್ಮಿಕರ ಕಲ್ಯಾಣಕ್ಕೆ ಒತ್ತು: ಬಜೆಟ್ನಲ್ಲಿ ಪೌರಕಾರ್ಮಿಕರ ಹಿತದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಳಗಿನ ಉಪಹಾರ ಯೋಜನೆಯನ್ನು ಮುಂದುವರಿಸುವುದು, ಮೂರು ತಿಂಗಳಿಗೊಮ್ಮೆ ಕಡ್ಡಾಯ ವೈದ್ಯಕೀಯ ತಪಾಸಣೆ ನಡೆಸುವುದು, ಕಾಯಂ ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರಿಗೆ ಜೀವವಿಮೆ ಸೌಲಭ್ಯ ಒದಗಿಸುವುದು, ‘ಗೃಹಭಾಗ್ಯ’ ಯೋಜನೆಯಡಿ ಮನೆ ನಿರ್ಮಾಣ ಮತ್ತು ಅವಲಂಬಿತ ಕುಟುಂಬಗಳಿಗೆ ವೈದ್ಯಕೀಯ ಸಹಾಯಧನ ನೀಡುವುದು ಪ್ರಮುಖವಾಗಿವೆ.

ಪಟ್ಟಣಾಭಿವೃದ್ಧಿಗೆ ಪ್ರಾಮುಖ್ಯತೆ: ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಿಡಿತ ಮತ್ತು ಸಂತಾನ ನಿಯಂತ್ರಣ (ಸ್ಟೆರಿಲೈಸೇಶನ್) ಕ್ರಮಗಳಿಗೆ ಹೆಚ್ಚುವರಿ ಅನುದಾನ ಮೀಸಲಿಡಲಾಗಿದೆ. ಪುರಸಭೆ ವ್ಯಾಪ್ತಿಯ ಸ್ವತ್ತುಗಳನ್ನು ಗುರುತಿಸಿ ತಂತಿಬೇಲಿ ಹಾಕುವ ಕಾರ್ಯಕ್ಕೂ ಹಣ ಮೀಸಲಾಗಿದೆ.

ನಾಗರಿಕರ ಸೌಲಭ್ಯಗಳು: ಮುಖ್ಯ ಬಿ.ಬಿ. ರಸ್ತೆಯಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಫುಟ್ಪಾತ್ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಪ್ರಮುಖ ಉದ್ಯಾನಗಳಲ್ಲಿ ವ್ಯಾಯಾಮ ಸಲಕರಣೆ ಅಳವಡಿಕೆ ಮೂಲಕ ನಾಗರಿಕರ ಆರೋಗ್ಯವನ್ನು ಉತ್ತೇಜಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.

ಘನತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವುದು, ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳ ಉನ್ನತೀಕರಣ, ದೇವಾಲಯಗಳಲ್ಲಿ ಉತ್ಪತ್ತಿಯಾಗುವ ಹಸಿತ್ಯಾಜ್ಯ ಸಂಸ್ಕರಣೆಗೆ ಕೋ-ಕಾಂಪೋಸ್ಟಿಂಗ್ ಘಟಕಗಳನ್ನು ಸ್ಥಾಪಿಸುವುದೂ ಬಜೆಟ್ನಲ್ಲಿ ಒಳಗೊಂಡಿದೆ.

ಇತರೆ ಯೋಜನೆಗಳು: ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು, ರಸ್ತೆ ಸ್ವಚ್ಛತೆಗೆ ಸ್ವೀಪಿಂಗ್ ಯಂತ್ರ ಖರೀದಿ, ಎಲ್ಲ ವರ್ಗದ ಜನರಿಗೆ ಶವ ಸಂಸ್ಕಾರಕ್ಕೆ ಸಹಾಯಧನ, ಪಟ್ಟಣದ ಬಸ್ ನಿಲ್ದಾಣಗಳ ದುರಸ್ತಿ ಕಾರ್ಯ ಕೈಗೊಳ್ಳುವ ಯೋಜನೆ ಘೋಷಿಸಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ಎ. ಶಿವಮೂರ್ತಿ ಮಾತನಾಡಿ, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಬೇಡಿಕೆಗಳನ್ನು ಪರಿಗಣಿಸಿ ಈ ಆಯವ್ಯಯ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪುರಸಭೆಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-15-145777924

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.