ದೇವನಹಳ್ಳಿ: ದಾದಿಯರ ಮುಖದಲ್ಲಿ ನಗು ಇದ್ದರೆ ರೋಗಿಗಳ ಆರೋಗ್ಯ ಸ್ಥಿತಿ ಬೇಗ ಸುಧಾರಿಸುತ್ತದೆ. ಅವರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು ಇದ್ದಂತೆ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವೈಸಾಕ್ ಹೇಳಿದರು.

ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ದಾದಿಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹುಟ್ಟಿನಿಂದ ಜೀವನದ ಕೊನೆಯ ಹಂತದವರೆಗೆ ವಿವಿಧ ಸಂದರ್ಭಗಳಲ್ಲಿ ದಾದಿಯರ ಸೇವೆ ಅಮೂಲ್ಯವಾದುದು. ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ರೋಗಿಗಳ ಆರೈಕೆ, ಔಷಧಿಗಳ ಕುರಿತು ಮಾರ್ಗದರ್ಶನ, ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ದಾದಿಯರು ಸಮರ್ಪಕವಾಗಿ ನಿರ್ವಹಿಸುತ್ತಾರೆ ಎಂದು ಹೇಳಿದರು.

ವೈದ್ಯರು ಚಿಕಿತ್ಸೆ ನೀಡಿದ ಬಳಿಕ ದಾದಿಯರು ರೋಗಿಗಳ ಆರೈಕೆಯ ಸಂಪೂರ್ಣ ಹೊಣೆ ಹೊರುತ್ತಾರೆ. ಹಲವು ಒತ್ತಡಗಳ ನಡುವೆಯೂ ಅವರು ತಾಯಿಯ ಹೃದಯದಿಂದ ಸೇವೆ ಸಲ್ಲಿಸುತ್ತಾರೆ. ರೋಗಿಗಳ ವಿಶ್ವಾಸ ಗಳಿಸಿ ಆತ್ಮಸ್ಥೈರ್ಯ ತುಂಬುವಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ವಿಶ್ವಮಟ್ಟದಲ್ಲಿ ಆಧುನಿಕ ಶುಶ್ರೂಷಾ ಸೇವೆಯ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ವಿಶ್ವ ದಾದಿಯರ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು.

ರೋಗಿಗಳ ಚೇತರಿಕೆಗೆ ವೈದ್ಯರ ಚಿಕಿತ್ಸೆ ಮತ್ತು ಔಷಧಿಗಳಷ್ಟೇ ದಾದಿಯರ ಆರೈಕೆ ಕೂಡ ಮುಖ್ಯ. ಹಗಲು-ರಾತ್ರಿ ಎನ್ನದೆ ಸೇವೆ ಸಲ್ಲಿಸುವ ದಾದಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ. ಆಸ್ಪತ್ರೆಯ ಯಾವುದೇ ವಿಭಾಗದಲ್ಲಿ ಅವರ ಸೇವೆ ಅನಿವಾರ್ಯ ಎಂದು ಹೇಳಿದರು.

ರೋಗಿಗಳ ಮೊದಲ ವೈದ್ಯರೆಂದೇ ದಾದಿಯರನ್ನು ಕರೆಯಬಹುದು. ಬೆಳಗ್ಗೆಯಿಂದ ರಾತ್ರಿ ತನಕ ರೋಗಿಗಳ ಸೇವೆಗೆ ಸನ್ನದ್ಧರಾಗಿರುವ ಅವರು ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಮದರ್ ತೆರೆಸಾ ಹಾಗೂ ನೈಟಿಂಗೇಲ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

ವೈದ್ಯರಾದ ಡಾ. ಶ್ರೀನಿವಾಸ, ಡಾ. ಜ್ಞಾತ್ ಕುಮಾರ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ದಾದಿಯರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-15-628462686

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.