ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ| ಹಬ್ಬಕ್ಕೆ ಗುಲಾಬಿ ದುಬಾರಿ: ತೋಟಕ್ಕೆ ನುಗ್ಗಿ ಹೂವನ್ನೇ ಕದ್ದ ಕಳ್ಳರು

Last Updated 14 ಜನವರಿ 2023, 5:37 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ(ದೇವನಹಳ್ಳಿ): ಕಳೆದ ಐದಾರು ದಿನಗಳಿಂದ ನಿರಂತರವಾಗಿ ಶೀತ ವಾತಾವರಣ ಇರುವ ಕಾರಣ ಹೂವುಗಳ ಇಳುವರಿಯಲ್ಲಿ ವ್ಯತ್ಯಯವಾಗಿದ್ದು, ಚಳಿಗಾಲದಲ್ಲಿ ಮೊಗ್ಗುಗಳು ರೋಗಗಳಿಗೆ ಬಾಧಿತಗೊಳ್ಳುತ್ತದೆ. ಹಬ್ಬದ ಸಂದರ್ಭದಲ್ಲಿ ಹೂವುಗಳಿಗೆ ಬೇಡಿಕೆಯೂ ಹೆಚ್ಚಾಗಿದ್ದು, ಮಿರಾಬೆಲ್‌ ಗುಲಾಬಿ ಕೆ.ಜಿಗೆ ₹200ರಂತೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ.

ತಾಲ್ಲೂಕಿನ ನಲ್ಲೂರು ಗ್ರಾಮದ ಶಿವರಾಜ್‌ ಎಂಬುವರ ತೋಟದಲ್ಲಿದ್ದ ಮಿರಾಬೆಲ್‌ ಗುಲಾಬಿ ಹೂವು ಗುರುವಾರ ತಡರಾತ್ರಿ 50 ಕೆ.ಜಿ ಹೂ ಕಳುವಾಗಿದ್ದು, ಸುಮಾರು ₹10,000 ನಷ್ಟ ಉಂಟಾಗಿದೆ. ಸುತ್ತಮುತ್ತಲಿನ ಮಲ್ಲೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುಲಾಬಿ ಹೂ ಕಳತನವಾಗುತ್ತಿರುವ ಬಗ್ಗೆ ಮಾಹಿತಿ ದೊರೆಯುತ್ತಿದ್ದು, ರೈತರು ಸಂಕ್ರಾಂತಿ ವೇಳೆಗೆ ಹೂವುಗಳನ್ನು ಕಾಯಲು ರಾತ್ರಿ ವೇಳೆಯಲ್ಲಿ ಕಾವಲು ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಿನ ಚಳಿಯಿಂದ ಹೂವಿನ ಇಳುವರಿ ಕಡಿಮಯಾಗಿದೆ. ಧನುರ್ಮಾಸ ಹಾಗೂ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಕಳ್ಳರು ಗುಲಾಬಿ ತೋಟಕ್ಕೆ ನೂಗ್ಗಿ ಹೂ ಕಳ್ಳತನ ಮಾಡುತ್ತಿದ್ದಾರೆ ಎಂದು ರೈತ ರಾಜೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT