ದೇವನಹಳ್ಳಿ: ವಿಮಾನ ನಿಲ್ದಾಣದ ಸಮೀಪದ ಅಕ್ಲೇನಹಳ್ಳಿ–ಮಲ್ಲೇನಹಳ್ಳಿಯಲ್ಲಿ ಸರ್ಕಾರಿ ಕೆರೆ ಹಾಗೂ ಗೋಮಾಳ ಜಮೀನಿನ ಒತ್ತುವರಿ ತೆರವುಗೊಳಿಸಿ, ಮೂಲ ಗ್ರಾಮಠಾಣದಲ್ಲಿ ಮನೆ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ ಎಂದು ಕೆಆರ್ಎಸ್ ಪಕ್ಷದ ಯುವ ಮುಖಂಡ ನಿಖಿಲ್ ತಿಳಿಸಿದರು.

ಅಕ್ಲೇನಹಳ್ಳಿ–ಮಲ್ಲೇನಹಳ್ಳಿಯಲ್ಲಿದ್ದ ನೂರಾರು ಎಕರೆ ಸರ್ಕಾರಿ ಗೋಮಾಳ ಹಾಗೂ ಇತರ ಜಮೀನುಗಳನ್ನು ಪ್ರಭಾವಿ ಭೂಗಳ್ಳರು ಕಾನೂನುಬಾಹಿರವಾಗಿ ಕಬಳಿಸಿದ್ದಾರೆ. ಇದರಿಂದ ಗ್ರಾಮಸ್ಥರು ಸ್ಥಳದಿಂದ ವಂಚಿತರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸುಮಾರು ನಾಲ್ಕು ದಶಕಗಳ ಹಿಂದೆ ಗ್ರಾಮಕ್ಕೆ ನೀರು ನುಗ್ಗಿಸಿ ಗ್ರಾಮಸ್ಥರನ್ನು ಬಲವಂತವಾಗಿ ಸ್ಥಳಾಂತರ ಮಾಡಲಾಗಿದೆ. ಆಗಿನಿಂದಲೂ ಭ್ರಷ್ಟ ಅಧಿಕಾರಿಗಳು ಪ್ರಭಾವಿಗಳ ಪರವಾಗಿ ನಡೆದುಕೊಂಡಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.

‘ಅಕ್ಲೇನಹಳ್ಳಿ–ಮಲ್ಲೇನಹಳ್ಳಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕ್ಷೇಮಾಭಿವೃದ್ಧಿ ಸಂಘ’ದ ಮೂಲಕ ಸುದೀರ್ಘ ಕಾಲದಿಂದ ಸಾಮಾಜಿಕ ಹಾಗೂ ನ್ಯಾಯಾಂಗ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಸ್ಪಂದಿಸಿಲ್ಲ, ಗ್ರಾಮದ 6 ಎಕರೆ 18 ಗುಂಟೆ ಗ್ರಾಮಠಾಣ ಜಮೀನನ್ನು ಕಾನೂನುಬಾಹಿರವಾಗಿ ಇತರರಿಗೆ ನೀಡಲು ‘ಅದಲು-ಬದಲು’ ಹೆಸರಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಕ್ಕೆ ನೀಡಲಾಗುತ್ತಿದೆ ಎನ್ನುವ ಜಮೀನೂ ಸಹ ಖರಾಬ್ ಜಮೀನೇ ಆಗಿದೆ ಎಂದರು.

‘ಅನ್ಯಾಯಗಳ ವಿರುದ್ಧ ಮಾರ್ಚ್ 31ರೊಳಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವು, ಆದರೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಏಪ್ರಿಲ್ 4ರಂದು ಗ್ರಾಮಸ್ಥರೆಲ್ಲರೂ ಮೂಲ ಗ್ರಾಮಠಾಣ ಸ್ಥಳಕ್ಕೆ ತೆರಳಿ ಗುದ್ದಲಿ ಪೂಜೆ ನೆರವೇರಿಸಿ ಮನೆ ನಿರ್ಮಾಣ ಆರಂಭಿಸಲಿದ್ದೇವೆ. ಜೊತೆಗೆ ಕೆರೆಯಲ್ಲಿನ ರಸ್ತೆ ಅಗೆದು ಒತ್ತುವರಿ ತೆರವುಗೊಳಿಸಲಾಗುವುದು’ ಎಂದು ಹಿರಿಯ ಹೋರಾಟಗಾರ ಸಿದ್ದಾರ್ಥ್ ತಿಳಿಸಿದರು.

ವೆಂಕಟೇಶ್ ಮೂರ್ತಿ, ನಾಗರಾಜ್, ಮುನಿಂದ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-15-883951135

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.