ಬೆಂಗಳೂರು: ಮಲಮೂತ್ರ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ದೇವನಹಳ್ಳಿ ಬಳಿ ಭಾರತದ ಮೊದಲ ಪುರಸಭೆಮಟ್ಟದ ‘ಮಲಮೂತ್ರ ತ್ಯಾಜ್ಯ ಸಂಸ್ಕರಣಾ ಘಟಕ’ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಕುರಿತು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಾಹಿತಿ ನೀಡಿದ್ದಾರೆ.

‘ವೇಗವಾಗಿ ಬೆಳೆಯುತ್ತಿರುವ ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯ ವ್ಯವಸ್ಥೆಯನ್ನು ಒದಗಿಸುವುದು ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಮಹಾನಗರಗಳಲ್ಲಿ ಒಳಚರಂಡಿ ಜಾಲಗಳು ಲಭ್ಯವಿದ್ದರೂ, ಸಣ್ಣ ಪಟ್ಟಣಗಳಲ್ಲಿನ ಹೆಚ್ಚಿನ ಮನೆಗಳು ಸೆಪ್ಟಿಕ್ ಟ್ಯಾಂಕ್ಗಳು ಹಾಗೂ ಇತರೆ ಸ್ಥಳೀಯ ನೈರ್ಮಲ್ಯ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿವೆ. ಈ ವ್ಯವಸ್ಥೆಗಳಿಂದ ಉತ್ಪತ್ತಿಯಾಗುವ ಮಲಮೂತ್ರ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿರುವುದು ಪರಿಸರ ಮಾಲಿನ್ಯ, ಜಲಮೂಲಗಳ ಕಲುಷಿತತೆ ಹಾಗೂ ಸಾರ್ವಜನಿಕ ಆರೋಗ್ಯದ ಅಪಾಯಗಳಿಗೆ ಕಾರಣವಾಗುತ್ತದೆ. ಈ ಸವಾಲುಗಳನ್ನು ಮನಗಂಡು ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ನೂತನ ಘಟಕ ಸ್ಥಾಪಿಸಲಾಗಿದೆ. ಈ ಘಟಕವು ವೈಜ್ಞಾನಿಕ ಹಾಗೂ ಸುಸ್ಥಿರ ನೈರ್ಮಲ್ಯ ನಿರ್ವಹಣೆಗೆ ಮಾದರಿಯಾಗಿದೆ’ ಎಂದು ಹೇಳಿದರು.

‘ದೇವನಹಳ್ಳಿಯು ಬೆಂಗಳೂರಿನ ಸಮೀಪ ಇದ್ದು, ಸುಮಾರು 40,000 ಜನಸಂಖ್ಯೆ ಹಾಗೂ 7,105 ಕುಟುಂಬಗಳನ್ನು ಅಹೊಂದಿದೆ. ಪಟ್ಟಣದ ಬಹುತೇಕ ಮನೆಗಳು 5,110 ಸೆಪ್ಟಿಕ್ ಟ್ಯಾಂಕ್ಗಳ ಮೂಲಕ ನೈರ್ಮಲ್ಯ ವ್ಯವಸ್ಥೆಯನ್ನು ಅವಲಂಬಿಸಿವೆ. ಯೋಜನೆಯ ಅನುಷ್ಠಾನಕ್ಕೂ ಮೊದಲು ಈ ವ್ಯವಸ್ಥೆಗಳಿಂದ ಉತ್ಪತ್ತಿಯಾಗುವ ಮಲಮೂತ್ರ ತ್ಯಾಜ್ಯದ ಸಂಗ್ರಹಣೆ, ಸಾಗಣೆ, ಸಂಸ್ಕರಣೆ ಹಾಗೂ ವಿಲೇವಾರಿಗೆ ಯಾವುದೇ ವ್ಯವಸ್ಥಿತ ವ್ಯವಸ್ಥೆ ಇರಲಿಲ್ಲ. ಹಾಗಾಗಿ, ಘಟಕ ಸ್ಥಾಪಿಸಲಾಯಿತು. ಘಟಕವು ಇದುವರೆಗೆ 1.8 ಮಿಲಿಯನ್ ಲೀಟರ್ಗಿಂತ ಅಧಿಕ ಮಲಮೂತ್ರ ತ್ಯಾಜ್ಯವನ್ನು ಸಂಸ್ಕರಿಸಿದೆ. 19,000 ಕಿ.ಗ್ರಾಂ ಗಿಂತ ಹೆಚ್ಚು ಸಹ-ಕಾಂಪೋಸ್ಟ್ ಮಾರಾಟ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-15-356825677

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.