ದೇವನಹಳ್ಳಿ ತಾಲ್ಲೂಕಿನಲ್ಲಿ ಶೇ 6.26 ಬಿತ್ತನೆ 

7
15 ದಿನಗಳಲ್ಲಿ ಮಳೆ ಬಂದು ಬಿತ್ತನೆ ಆಗದಿದ್ದರೆ ಸಂಕಷ್ಟ

ದೇವನಹಳ್ಳಿ ತಾಲ್ಲೂಕಿನಲ್ಲಿ ಶೇ 6.26 ಬಿತ್ತನೆ 

Published:
Updated:
Deccan Herald

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನಲ್ಲಿ ಈವರೆಗೆ ಕೇವಲ ಶೇ 6.26ರಷ್ಟು ಬಿತ್ತನೆ ಆಗಿರುವುದು ಕೃಷಿ ವಲಯದಲ್ಲಿ ಆತಂಕ ಮೂಡಿಸಿದೆ.

ಕೃಷಿ ಇಲಾಖೆ ಜಂಟಿ ನಿರ್ದೇಶಕರ ಮಾಹಿತಿಯಂತೆ ದೇವನಹಳ್ಳಿ ತಾಲ್ಲೂಕು ನೀರಾವರಿ ಮತ್ತು ಖುಷ್ಕಿ ವ್ಯಾಪ್ತಿಯಲ್ಲಿರುವ 9,705 ಹೆಕ್ಟೇರ್ ವಿಸ್ತೀರ್ಣದ ಪೈಕಿ 608 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. 2017ನೇ ಸಾಲಿನಲ್ಲಿ ಇದೇ ಅವಧಿಯಲ್ಲಿ ಶೇ 52ರಷ್ಟು ಬಿತ್ತನೆ ಮುಗಿದಿತ್ತು.

ಬರಗಾಲದತ್ತ ದೇವನಹಳ್ಳಿ, ಹೊಸಕೋಟೆ ತಾಲ್ಲೂಕು: ಈ ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಸತತ ನಾಲ್ಕು ವರ್ಷ ಬರಗಾಲ ಅನುಭವಿಸಿದ ರೈತರು 2017ನೇ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೆರೆ ತುಂಬಿದ್ದರೂ ಸಕಾಲದಲ್ಲಿ ಬಂದ ಮಳೆ ಮತ್ತು ಹಿಂಗಾರು ಹಂಗಾಮಿನಲ್ಲಿ ಚಂಡ ಮಾರುತಗಳಿಂದ ಸುರಿದ ಮಳೆಯಿಂದ ಬೆಳೆ ಬೆಳೆದು ಕೊನೆಗೂ ನಿಟ್ಟುಸಿರು ಬಿಟ್ಟದ್ದರು.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಆರ್ಭಟ ತೊರಿದ ವರುಣ ಬಿತ್ತನೆಯ ಸಕಾಲದಲ್ಲಿ ಕೈಕೊಟ್ಟಿರುವುದು ರೈತರದಲ್ಲಿ ಈ ಹಿಂದಿನ ಬರದ ಛಾಯೆ ನೆನಪು ಮಾಡುವಂತ ಸ್ಥಿತಿಗೆ ದೂಡಿದೆ ಎಂಬುದು ರೈತ ವಲಯದಲ್ಲಿ ಕೇಳಿಬರುತ್ತಿವೆ.

ಮಳೆ ಸಕಾಲದಲ್ಲಿ ಬಾರದ ಹಿನ್ನಲೆಯಲ್ಲಿ ಬಿತ್ತನೆಗೆ ಭಾರಿ ಹಿನ್ನಡೆಯಾಗಿದೆ. ಇನ್ನು 15 ದಿನಗಳಲ್ಲಿ ಮಳೆ ಬಂದು ಬಿತ್ತನೆಯಾದರೆ ಮಾತ್ರ ರೈತರು ಉಸಿರುಡುವಂತಾಗಬಹುದು. ಇಲ್ಲದಿದ್ದರೆ ಬರದ ಸುಳಿಯಲ್ಲಿ ರೈತರು ಒದ್ದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ತಾಲ್ಲೂಕನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿ ತುರ್ತು ಅಗತ್ಯ ಕ್ರಮಕೈಗೊಳ್ಳಬೇಕು. ಪರಿಹಾರಾತ್ಮಕ ಯೋಜನೆಗಳನ್ನು ತ್ವರಿತವಾಗಿ ನೀಡುವುದು ಅನಿವಾರ್ಯವಾಗಲಿದೆ ಎನ್ನುತ್ತಾರೆ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎನ್. ವೀರಣ್ಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !