ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯರ ಸಹಭಾಗಿತ್ವದಿಂದ ಕೆರೆಗಳ ಅಭಿವೃದ್ಧಿ

Last Updated 8 ಜುಲೈ 2019, 13:36 IST
ಅಕ್ಷರ ಗಾತ್ರ

ದೇವನಹಳ್ಳಿ: ಜಲಮೂಲಗಳು ನಶಿಸುತ್ತಿರುವ ಈ ಪರಿಸ್ಥಿತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಸ್ಥಳೀಯರ ಸಹಭಾಗಿತ್ವದ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ. ಮಂಜುನಾಥ್ ಅಭಿಪ್ರಾಯಪಟ್ಟರು.

ಇಲ್ಲಿನ ಕನ್ನಮಂಗಲ ಗೇಟ್ ಬಳಿ ಬೃಹತ್ ಬೆಂಗಳೂರು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ವತಿಯಿಂದ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಡ್ರೈವರ್ಸ್ ಯುನಿಯನ್ ವತಿಯಿಂದ ಕನ್ನಮಂಗಲ ಕೆರೆ ಅಭಿವೃದ್ಧಿಗೆ ₹25 ಸಾವಿರ ಚೆಕ್ ಸ್ವೀಕರಿಸಿ ಮಾತನಾಡಿದರು.

ಕನ್ನಮಂಗಲ ಕೆರೆ ಶೇ 80 ರಷ್ಟು ಅಭಿವೃದ್ಧಿಯಾಗಿದೆ.ಎರಡು ಬಾರಿ ಒಂದೊಂದು ತಾಸು ಸುರಿದ ಸಾಧಾರಣ ಮಳೆಯಿಂದ ಕೆರೆಗೆ ಎರಡು ಅಡಿ ನೀರು ಹರಿದು ಬಂದಿದೆ. ಜಿಲ್ಲಾಧಿಕಾರಿ ಸಿ.ಎಸ್. ಕರೀಗೌಡರ ದೂರದೃಷ್ಟಿ ಚಿಂತನೆಯ ಜೊತೆಗೆ ಸ್ಥಳೀಯ ಮುಖಂಡರ ಇಚ್ಛಾಶಕ್ತಿಯಿಂದ ಕಾಮಗಾರಿ ನಡೆಸಲು ಸಾಧ್ಯವಾಗಿದ್ದು ಪ್ರಸ್ತುತ ಉಳಿದ ಕೆರೆಯಲ್ಲಿನ ಹೂಳು ಹಾಕುವ ಕೆಲಸ ಮುಂದುವರೆಸಲಾಗಿದೆ ಎಂದು ಹೇಳಿದರು.

ಕುಂದಾಣ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿನ ದ್ಯಾವರಹಳ್ಳಿ ಕೆರೆಯನ್ನು ಸ್ಥಳೀಯರು ಈಗಾಲೇ ಪೂರ್ಣಗೊಳಿಸಿದ್ದಾರೆ. ಜಾಲಿಗೆ ಗ್ರಾಮದ ಕೆರೆಯಲ್ಲಿ ಶೇ 50 ರಷ್ಟು ಕಾಮಗಾರಿ ಮುಗಿದಿದ್ದು ನೀರು ಕೆರೆಯಲ್ಲಿ ತುಂಬಿರುವುದರಿಂದ ಇನ್ನಷ್ಟು ಹೂಳು ಎತ್ತಲು ಸಾಧ್ಯವಾಗುತ್ತಿಲ್ಲ ಎಂದರು.

ದಾನಿಗಳು ಸ್ಥಳೀಯ ಮುಖಂಡರು ಕೆರೆ ಕುಂಟೆ ಗೋಕಟ್ಟೆಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವ ಕೆಲಸಕ್ಕೆ ಸಹಕರಿಸಬೇಕು. ಒಬ್ಬರಿಂದ ಈ ಕೆಲಸ ಸಾಧ್ಯವಿಲ್ಲ. ಎಲ್ಲರ ಸಾಮೂಹಿಕ ಪ್ರಯತ್ನವಾಗಬೇಕು ಎಂದು ಹೇಳಿದರು. ಡ್ರೈವರ್ ಯೂನಿಯನ್ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT