ಮಹಿಳೆ ಆರ್ಥಿಕ ಸ್ವಾವಲಂಬಿ ಆಗಬೇಕು: ಅಕ್ಷತಾ ರೈ

7
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಗೆ ತರಬೇತಿ

ಮಹಿಳೆ ಆರ್ಥಿಕ ಸ್ವಾವಲಂಬಿ ಆಗಬೇಕು: ಅಕ್ಷತಾ ರೈ

Published:
Updated:
Deccan Herald

ವಿಜಯಪುರ: ಮಹಿಳೆಯರು ಕುಟುಂಬಗಳ ನಿರ್ವಹಣೆಯ ಜೊತೆಗೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲ್ಲೂಕು ಘಟಕದ ಯೋಜನಾಧಿಕಾರಿ ಅಕ್ಷತಾ ರೈ ಹೇಳಿದರು.

ಇಲ್ಲಿನ ಮಹಾತ್ಮ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ‘ವಿಜಯಪುರ ವಲಯದ ಎ ಒಕ್ಕೂಟದ ಸದಸ್ಯರಿಗಾಗಿ ಆಯೋಜಿಸಿದ್ದ ತರಬೇತಿ’ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ರಂಗದಲ್ಲೂ ಸಮರ್ಥವಾಗಿ ತೊಡಗಿಸಿಕೊಳ್ಳಬಲ್ಲೆವು ಎನ್ನುವುದನ್ನು ಸಾಬೀತು ಪಡಿಸಬೇಕು’ ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮಾಂತರ ಪ್ರದೇಶಗಳಲ್ಲಿನ ಮಹಿಳೆಯರ ಸಬಲೀಕರಣ ಹಾಗೂ ಅವರಲ್ಲಿ ಕೌಶಲಗಳನ್ನು ಬೆಳೆಸುತ್ತಿದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವ ಗುರಿಯನ್ನು ಇಟ್ಟುಕೊಂಡಿದೆ ಎಂದು ಮಾಹಿತಿ ನೀಡಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ಒಕ್ಕೂಟದ ಸದಸ್ಯರಿಗೆ ತರಬೇತಿ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಹಣಕಾಸು  ವ್ಯವಹಾರ ಹೇಗೆ ನಡೆಸಬೇಕು, ಸಮಾಜದಲ್ಲಿ ಮಹಿಳೆಯರ ವರ್ತನೆ ಹೇಗಿರಬೇಕು, ತಮ್ಮ ಕುಟುಂಬದಲ್ಲಿ ಅವರ ಪಾತ್ರವೇನು, ಕೇವಲ ನಾಲ್ಕು ಗೋಡೆಗಳ ಮಧ್ಯದ ಜೀವನಕ್ಕೆ ಸೀಮಿತವಾಗದೆ, ಎಲ್ಲ ರಂಗಗಳಲ್ಲೂ ಭಾಗವಹಿಸುವಿಕೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ತರಬೇತಿಗಳ ಪ್ರಯೋಜನ ಪಡೆಯಬೇಕು ಎಂದರು.

ಮೇಲ್ವಿಚಾರಕಿ ಮನೋರಮಾ ಮಾತನಾಡಿ, ಸಂಘಗಳ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ವಾರದ ಸಭೆ, ನಾಯಕತ್ವ ಗುಣ, ಸಂಘದ ದಾಖಲೆ ನಿರ್ವಹಣೆ, ಒಕ್ಕೂಟ ಸಭೆ ಆಯೋಜನೆ ಮಾಡಲಾಗುತ್ತಿದೆ ಎಂದರು.

ಪಾರದರ್ಶಕ ವ್ಯವಹಾರದ ಮೂಲಕ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಸಂಘವನ್ನು ಮುನ್ನಡೆಸಿಕೊಂಡು ಹೋಗಬೇಕು. ತಂಡದ ಪ್ರತಿನಿಧಿಗಳು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.

ಯೋಜನೆಯ ಪದಾಧಿಕಾರಿಗಳಾದ ಮಾನಸ, ದೀಪಾ, ಶಮಾ, ರಾಧ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !