ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹ ನಿಯಂತ್ರಣಕ್ಕೆ ಜಾಗ್ರತೆ ಅಗತ್ಯ

Last Updated 7 ಸೆಪ್ಟೆಂಬರ್ 2022, 3:02 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ನಗರದ ಲಯನ್ಸ್ ಕ್ಲಬ್‌ನಿಂದ 40ನೇ ಮಧುಮೇಹ ತಪಾಸಣೆ ಮತ್ತು ಹಸಿವು ನಿವಾರಣಾ ಕಾರ್ಯಕ್ರಮವು ಲಯನ್ಸ್ ಚಾರಿಟೀಸ್ ಟ್ರಸ್ಟ್ ಸಭಾಂಗಣದಲ್ಲಿ ನಡೆಯಿತು.

ಲಯನ್ಸ್‌ ಕ್ಲಬ್‌ನ ಮಧುಮೇಹ ವಿಭಾಗದ ಡಾ.ಎನ್.ಎಂ. ರಾಜು ಶಿಬಿರ ಉದ್ಘಾಟಿಸಿ ಮಾತನಾಡಿ, ಮಧುಮೇಹವನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ನಿಯಂತ್ರಣದಲ್ಲಿ ಇರಲಿದೆ ಎಂದರು.

ಲಯನ್ಸ್‌ ಕ್ಲಬ್‌ನ ಗಾಯತ್ರಿ ಎಸ್. ಪ್ರಕಾಶ್ ಮತ್ತು ಕುಟುಂಬದವರು ಶಿಬಿರವನ್ನು ಪ್ರಾಯೋಜಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್‌ ಕ್ಲಬ್‌ನ ರವೀಂದ್ರನಾಥ್, ಕಾರ್ಯದರ್ಶಿ ಡಿ.ಕೆ. ಸೋಮಶೇಖರ್, ಖಜಾಂಚಿ ಮಂಜುನಾಥ್, ಸಹ ಕಾರ್ಯದರ್ಶಿ ರೇಖಾ ವೆಂಕಟೇಶ್‌, ಎಂಪಿಸಿ ವೆಂಕಟೇಶ್‌, ನಟರಾಜ್‌, ವೇಣುಗೋಪಾಲ್
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT