ಬುಧವಾರ, ಅಕ್ಟೋಬರ್ 23, 2019
22 °C

ವಿಲೇವಾರಿಯಾಗದ ಕಸ: ಜನರಿಗೆ ಕಿರಿಕಿರಿ

Published:
Updated:
Prajavani

ಸೂಲಿಬೆಲೆ: ಇಲ್ಲಿನ ಜನತಾ ಕಾಲೊನಿಯ ಜಂಗಮಕೋಟೆ ಮುಖ್ಯರಸ್ತೆಯಲ್ಲಿರುವ ಕಸದ ತೊಟ್ಟಿಯಲ್ಲಿ ಕಸ ತುಂಬಿ ಹೊರ ಚೆಲ್ಲಿದ್ದರೂ ವಿಲೇವಾರಿಯಾಗದೇ ಕೊಳೆತು ನಾರುತ್ತಿದ್ದು ಜನ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ಸೂಕ್ತ ಸಮಯಕ್ಕೆ ಕಸ ವಿಲೇವಾರಿಯಾಗದ ಕಾರಣ ಸುತ್ತಲಿನ ಮನೆಗಳಿಗೆ ದುರ್ನಾತ ಹರಡಿದ್ದು, ಸಹಿಸಲಸಾಧ್ಯವಾಗಿದೆ. ಕಸದ ತೊಟ್ಟಿಗೆ ಕಸದೊಂದಿಗೆ ಪ್ಲಾಸ್ಟಿಕ್ ಪೇಪರ್‌ಗಳನ್ನೂ ಹಾಕಿದ್ದು ಗಾಳಿ ಬೀಸಿದಾಗ ತೂರಿಕೊಂಡು ರಸ್ತೆಯಲ್ಲಿ ಓಡಾಡುವ ಜನ ಹಾಗು ವಾಹನಗಳ ಮೇಲೆ ಬೀಳುತ್ತಿದ್ದು, ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ. ಕಸ ವಿಲೇವಾರಿಯಾಗದಿರುವುದರಿಂದ ನಾಯಿಗಳ ಕಾಟ ಹೆಚ್ಚಾಗುತ್ತಿದ್ದು ರಸ್ತೆಯಲ್ಲಿ ಓಡಾಡುವವರಿಗೆ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)