ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಕುರಿ ಮತ್ತು ಮೇಕೆ ವಿತರಣೆ

Last Updated 7 ನವೆಂಬರ್ 2018, 14:58 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನಲ್ಲಿ ಕುರಿ ಮತ್ತು ಮೇಕೆಗಳ ಅಭಿವೃದ್ಧಿಗಾಗಿ ರೈತರಿಗೆ ಕೇಂದ್ರ ಸರ್ಕಾರದ ವತಿಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಟಗರು ಮತ್ತು ಹೋತಗಳನ್ನು ಕೊಡಲಾಗುತ್ತಿದೆ ಎಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಕುರಿ ಮತ್ತು ಪೋಷಕರ ಸಂಘದ ಅಧ್ಯಕ್ಷ ತೊಪ್ಪಗನಹಹಳ್ಳಿ ಗೋಪಾಲ್ ತಿಳಿಸಿದರು.

ನಗರದ ಹೊಸಕೋಟೆ ಗ್ರಾಮದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಭಾರತ್ ಮೆರಿನ್ ಮತ್ತು ಅವಿಕ್ಲಿನ್ ಬಿತ್ತನೆ ಟಗರು ಮತ್ತು ಕುರಿಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ಸಂಘ ಪ್ರಾರಂಭಗೊಂಡ ಮೇಲೆ ರೈತರಿಗೆ ಈವರೆಗೂ ಮೂರು ಬಾರಿ ಕುರಿ ಮತ್ತು ಮೇಕೆ ವಿತರಣೆ ಮಾಡಿದ್ದೇವೆ. ಈ ಬಾರಿ ನೇರವಾಗಿ ಕುರಿ ತಳಿ ಅಭಿವೃದ್ಧಿ ಫಾರಂನಿಂದಲೇ ಕುರಿ ಖರೀದಿಸುತ್ತಿದ್ದೇವೆ ಎಂದರು.

ತಾಲ್ಲೂಕಿನ ಒಟ್ಟು 16 ರೈತರಿಗೆ ಒಂದು ಜೋಡಿ ಕುರಿ ಕೊಡುತ್ತಿದ್ದೇವೆ. ಈ ಜೋಡಿಯಲ್ಲಿ ಒಂದು ಗಂಡು ಮತ್ತೊಂದು ಹೆಣ್ಣು ಕುರಿ ಇರಲಿವೆ. ಇವುಗಳನ್ನು ಪಡೆದ ರೈತರು ಸೂಕ್ತ ರೀತಿಯಲ್ಲಿ ಸಾಕಾಣಿಕೆ ಮಾಡಿ ತಳಿ ಅಭಿವೃದ್ಧಿ ಪಡಿಸಬೇಕು ಎಂದರು.

ಸಂಘದ ಕಾರ್ಯದರ್ಶಿ ಕೆ.ಪಿ.ಶಿವಕಾಂತ, ಸದಸ್ಯ ಮೋಹನ್ ಎಸ್.ಆರ್.ಎಸ್, ಚೇರ್ಮನ್ ಪುಟ್ಟೇಗೌಡ, ತಾಮಸಂದ್ರ ನಾಗರಾಜು, ಜೆ.ಸಿ.ಬಿ. ರಾಜು, ಹೋಟೆಲ್ ಮಹೇಶ್, ಕೃಷ್ಣ ಉಪಸ್ಥಿತರಿದ್ದರು.

ಫಲಾನುಭವಿಗಳು: ಪುರುಷೋತ್ತಮ್ ಹೊಸಕೋಟೆ, ಟಿ.ಕೆ.ನಾಗರಾಜು ತಾಮಸಂದ್ರ, ರಾಜಣ್ಣ ತೊಪ್ಪಗನಹಳ್ಳಿ, ಮರೀಗೌಡನದೊಡ್ಡಿ ರಾಜಣ್ಣ, ತುಂಗಣಿ ಪುಟ್ಟೇಗೌಡ, ತುಂಗಣಿ ರಮೇಶ್, ಜಂಪಾಲೇಗೌಡನದೊಡ್ಡಿ ನಾಗರಾಜು, ಹೋಟೆಲ್ ಮಹೇಶ್, ವಿರುಪಸಂದ್ರ ಚಿನ್ನಗಿರಿಗೌಡ, ತೊಪ್ಪಗನಹಳ್ಳಿ ಭರತ್, ಸೊಂಟೇನಹಳ್ಳಿ ಗ್ರಾಮದ ಹನುಮಂತಯ್ಯ, ಜಗದೀಶ್, ಚಿನ್ನಗಿರಿಗೌಡ, ಶಶಿಕಲ ತೊಪ್ಪಗನಹಳ್ಳಿ ಅವರಿಗೆ ಕುರಿ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT