ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರ್ವಾ ಉತ್ಪತ್ತಿಗೆ ಅವಕಾಶ ಕೊಡದಿರಿ

Last Updated 8 ಜೂನ್ 2019, 14:09 IST
ಅಕ್ಷರ ಗಾತ್ರ

ವಿಜಯಪುರ: ಡೆಂಗಿ, ಮಲೇರಿಯಾ, ಟೈಫಾಯಿಡ್ ನಂತಹ ಕಾಯಿಲೆಗಳು ಬರಲಿಕ್ಕೆ ಮೂಲ ಕಾರಣವಾಗಿರುವ ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ನೀಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಘಟಕದ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಧರ್ಮೇಂದ್ರ ಹೇಳಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಜನರು ಶೇಖರಣೆ ಮಾಡಿ ಇಟ್ಟುಕೊಂಡಿರುವ ನೀರಿನಲ್ಲಿ ಲಾರ್ವಾಗಳು ಉತ್ಪತ್ತಿಯಾಗಿರುವುದನ್ನು ಜನರಿಗೆ ತೋರಿಸಿ, ಅಂತಹ ನೀರನ್ನು ಚೆಲ್ಲುವ ಮೂಲಕ ಅವರಿಗೆ ಅರಿವು ಮೂಡಿಸಿದರು.

ಶುದ್ಧವಾದ ನೀರಿನಲ್ಲಿ ಲಾರ್ವಾಗಳು ಉತ್ಪತ್ತಿಯಾಗುತ್ತವೆ. ಒಂದು ವಾರಕ್ಕಿಂತಲೂ ಹೆಚ್ಚು ದಿನ ನೀರು ಶೇಖರಣೆ ಮಾಡಿ ಅದನ್ನು ಮುಚ್ಚದೆ ಹೋದರೆ, ಲಾರ್ವಾಗಳು ಈಡೀಸ್ ಸೊಳ್ಳೆಗಳಾಗಿ ಪರಿವರ್ತನೆಯಾಗುತ್ತವೆ ಎಂದರು.

ಹಳೆ ಟೈರುಗಳು, ತೆಂಗಿನ ಚಿಪ್ಪುಗಳು ಸೇರಿದಂತೆ ನಿಂತಿರುವ ನೀರನ್ನು ತಕ್ಷಣ ಚೆಲ್ಲುವ ಮೂಲಕ ಮುಂದೆ ಆಗಬಹುದಾದ ಸಮಸ್ಯೆಗಳನ್ನು ತಡೆಗಟ್ಟಬೇಕು ಎಂದರು.

ಮನೆಗಳಲ್ಲಿ ಸಂಗ್ರಹಿಸಿರುವ ನೀರಿನ ಪರಿಕರಗಳನ್ನು ವಾರಕ್ಕೆರಡು ಬಾರಿ ಖಾಲಿ ಮಾಡಿ ಸ್ವಚ್ಛಗೊಳಿಸಿ ಚೆನ್ನಾಗಿ ಒಣಗಿಸಿ. ನೀರು ತುಂಬಿದ ನಂತರ ಭದ್ರವಾಗಿ ಮುಚ್ಚಿಡುವ ಮೂಲಕ ಆರೋಗ್ಯ ಇಲಾಖೆಗೆ ಸಹಕರಿಸಬೇಕು ಎಂದರು.

‘20 ದಿನಗಳಿಗೊಮ್ಮೆ ನೀರು ಬಿಡ್ತಾರೆ, ನೀರನ್ನು ಹೆಚ್ಚು ದಿನಗಳ ಕಾಲ ಸಂಗ್ರಹಿಸಿ ಇಡಬೇಕಾಗಿರುವ ಅನಿವಾರ್ಯತೆ ಇದೆ. ನಾವೇನು ಮಾಡೋಕೆ ಆಗುತ್ತೆ ಸರ್. ಕನಿಷ್ಠ ವಾರಕ್ಕೊಮ್ಮೆಯಾದರೂ ನೀರು ಬಿಟ್ಟರೆ ನಾವು ಎಲ್ಲ ಪಾತ್ರೆಗಳು, ಡ್ರಂಗಳನ್ನು ಚೆನ್ನಾಗಿ ತೊಳೆದು ನೀರು ಹಿಡಿಯಬಹುದು, ನೀರಿಲ್ಲದಿದ್ದಾಗ ಏನ್ ಮಾಡಬೇಕು’ ಎಂದು ಜನರು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT