ದೊಡ್ಡಬಳ್ಳಾಪುರ: ತಾಲ್ಲೂಕಿನ ಹಾಡೋನಹಳ್ಳಿ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ರೈತರ ಸಬಲೀಕರಣಕ್ಕೆ ತರಬೇತಿ ಮತ್ತು ಉಚಿತ ಬೀಜ ವಿತರಣೆ ಕಾರ್ಯಕ್ರಮದಡಿ ಕೃಷಿ ಪರಿಕರ ವಿತರಣೆ ಮತ್ತು ತರಬೇತಿ ಕಾರ್ಯಕ್ರಮ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆಯಿತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಹನುಮಂತರಾಯ ಮಾತನಾಡಿ, ಗುಣಮಟ್ಟದ ಬೀಜಗಳು ಮತ್ತು ಕೃಷಿ ಪರಿಕರಗಳ ಉಚಿತ ವಿತರಣೆ ಮತ್ತು ವೈಜ್ಞಾನಿಕ ಮಾರ್ಗದರ್ಶನ ಮೂಲಕ ಪರಿಶಿಷ್ಟ ಸಮುದಾಯ ರೈತರ ಉತ್ಪಾದಕತೆ ಹಾಗೂ ಆದಾಯ ಹೆಚ್ಚಿಸುವುದು ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ರೈತರಿಗೆ ನೀಡಲಾದ ತಂತ್ರಜ್ಞಾನ ಮತ್ತು ಕೃಷಿ ಪರಿಕರ ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚಿನ ಆದಾಯ ಮತ್ತು ಕೃಷಿಯಲ್ಲಿ ಸುಸ್ಥಿರತೆ ಕಂಡುಕೊಳ್ಳಬೇಕು ಎಂದರು.

ಕೃಷಿ ವಿಜ್ಞಾನಿ (ಬೇಸಾಯ ಶಾಸ್ತ್ರ) ಡಾ.ಜಿ.ಕೆ.ನಿಂಗರಾಜು ಮಾಹಿತಿ ನೀಡಿ, ತೊಗರಿ, ಮುಸುಕಿನ ಜೋಳ ಇತರ ಬೆಳೆಗಳ ವೈಜ್ಞಾನಿಕ ಬೆಳೆ ಬೆಳೆಯುವ ವಿಧಾನ ಅರಿಯಬೇಕು. ಸಾರಜನಕ ಸ್ಥಿರೀಕರಿಸುವ ಅಜೋಸ್ಪೈರಿಲ್ಲಂ ಸೂಕ್ಷ್ಮಾಣು ಜೀವಿಯಿಂದ ರಾಗಿ ಬೀಜೋಪಚಾರ ಮತ್ತು ತೊಗರಿ ರೈಜೋಬಿಯಂನಿಂದ ಬೀಜೋಪಚಾರ, ಸೂಕ್ತ ಅಂತರ, ಪೋಷಕಾಂಶ ನಿರ್ವಹಣೆ, ಮಳೆ ಕೊರತೆ ಸಮಯದಲ್ಲಿ ತೇವಾಂಶ ನಿರ್ವಹಣೆಗಾಗಿ ದೋಣಿ ಸಾಲು, ಪೊಟ್ಯಾಷ್ ಸಿಂಪಡಣೆ ಕ್ರಮಗಳನ್ನು ರೈತರು ಕೈಗೊಳ್ಳಬೇಕು ಎಂದರು.

ಮಣ್ಣು ವಿಭಾಗದ ವಿಜ್ಞಾನಿ ಡಾ.ಬಾಲಾಜಿ ನಾಯಕ್ ಮಾತನಾಡಿ, ಮಣ್ಣಿನ ಆರೋಗ್ಯ ನಿರ್ವಹಣೆಯಿಂದ ಬೆಳೆಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪದಾರ್ಥಗಳ ಬಳಕೆ ಹಾಗೂ ಮಣ್ಣಿನ ದೀರ್ಘಕಾಲಿಕ ಉತ್ಪಾದಕತೆ ಹೆಚ್ಚಿಸುವ ಕ್ರಮಗಳ ಮಾಹಿತಿ ನೀಡಿದರು.

ಎನ್.ಬಿ.ಎ.ಐ.ಆರ್ ಪ್ರಧಾನ ವಿಜ್ಞಾನಿ ಡಾ.ಗುಂಡಪ್ಪ, ಕೀಟ ಮತ್ತು ರೋಗ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿ, ಸಮಗ್ರ ಕೀಟ ನಿರ್ವಹಣೆ ಕ್ರಮಗಳ ಅಗತ್ಯ ಮಾಹಿತಿ ನೀಡಿದರು.

ಕೃಷಿ ವಿಶ್ವ ವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಕೆ.ವಿಶ್ವನಾಥ್, ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎ.ಬಿ.ನಾರಾಯಣರೆಡ್ಡಿ, ಹೊಸಹಳ್ಳಿ ಗ್ರಾಮದ ಪ್ರಗತಿಪರ ರೈತ ಲಕ್ಷ್ಮೀನಾರಾಯಣಪ್ಪ, ವಿಜ್ಞಾನಿಗಳು ಮತ್ತು ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-15-917697297

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.