ದೊಡ್ಡಬಳ್ಳಾಪುರ: ಶನೇಶ್ಚರ ಜಯಂತಿ ಅಂಗವಾಗಿ ಘಾಟಿ ಸುಬ್ರಹ್ಮಣ್ಯ ಸಮೀಪದ ಬಂಡೇಪಾಳ್ಯ ಕೆಳಗಿನ ಜೂಗಾನಹಳ್ಳಿಯಲ್ಲಿರುವ ದೇವರ ಬೆಟ್ಟದಲ್ಲಿ ವಿಶ್ವ ಶನೇಶ್ಚರಸ್ವಾಮಿ ರಥೋತ್ಸವ ಭಾನುವಾರ ಶ್ರದ್ಧಾ, ಭಕ್ತಿ ಸಂಭ್ರಮದಿಂದ ನಡೆಯಿತು. ರಥಕ್ಕೆ ಭಕ್ತರು ಬಾಳೆಹಣ್ಣು, ದವನ ಅರ್ಪಿಸಿ ಧನ್ಯತೆ ಮೆರೆದರು.

ರಥೋತ್ಸವ ಅಂಗವಾಗಿ ಅಂಕುರಾರ್ಪಣೆ, ಕಳಸ ಸ್ಥಾಪನೆ, ಧ್ವಜಾರೋಹಣ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಶನೇಶ್ಚರಸ್ವಾಮಿಗೆ ನಿತ್ಯ ಅಭಿಷೇಕ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ನಡೆದವು. ದೇವಾಲಯದಲ್ಲಿ ಬೆಳಗ್ಗಿನಿಂದ ಅಭಿಷೇಕ, ಅರ್ಚನೆ, ಹೋಮ ನೆರವೇರಿಸಲಾಯಿತು.

ಶನೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ದೇವಾಲಯದಿಂದ ತಂದು ಪಂಚ ಕಳಸದೊಂದಿಗೆ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು. ಮಧ್ಯಾಹ್ನ 2 ಗಂಟೆಗೆ ರಥೋತ್ಸವ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-15-1675643024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.