ದೇವನಹಳ್ಳಿ: ದೊಡ್ಡಬಳ್ಳಾಪುರದಲ್ಲಿ ಉಪವಿಭಾಗಧಿಕಾರಿಯಾಗಿದ್ದ ಸಮಯದಲ್ಲಿ ಹೈಕೋರ್ಟ್ ಮತ್ತು ಕರ್ನಾಟಕ ಮೇಲ್ಮನವಿ ಪ್ರಾಧಿಕಾರ (ಕೆಎಟಿ) ಹೆಸರಿನಲ್ಲಿ ನಕಲಿ ಆದೇಶ ಸೃಷ್ಟಿಸಿ ತಾಲ್ಲೂಕಿನ ಹಲವು ಪಹಣಿಯಲ್ಲಿ ಖಾತೆ ಬದಲಾಯಿಸಿದ್ದಾರೆ ಎಂದು ವರ್ಗಾವಣೆಗೊಂಡ ಉಪವಿಭಾಗಾಧಿಕಾರಿ ದುರ್ಗಾಶ್ರೀ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾವು ಉಪವಿಭಾಗಾಧಿಕಾರಿಯಾಗಿದ್ದವೇಳೆ ಕಚೇರಿಯ ಅನಾಮಿಕರು ತಮ್ಮ ಗಮನಕ್ಕೆ ಬಾರದಂತೆ ಡಿಜಿಟಲ್ ಸಹಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾವು ಉಪವಿಭಾಗಾಧಿಕಾರಿಯಾಗಿದ್ದ ವೇಳೆ ಮಾಡಲಾದ ಆದೇಶಗಳು ಸಹ ಕಚೇರಿಯಿಂದ ಕಂಪ್ಯೂಟರ್ ಮೂಲಕ ಖಾತೆ ಬದಲಾವಣೆಗೆ ಪುಶ್ ಆಗಿಲ್ಲ. ತಮ್ಮ ಡಿಜಿಟಲ್ ಕಾರ್ಡ್ ಬಳಸಿ ನಕಲಿ ಆದೇಶ ಸೃಷ್ಟಿಸಲಾಗಿದೆ ಎಂದು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಎಫ್ಐಆರ್ನಲ್ಲಿ ಕೇಲವು ಸರ್ವೆ ನಂಬರ್ ಹಾಗೂ ಒಂದೇ ಆದೇಶವನ್ನು ಮಾತ್ರ ನಮೂದಿಸಿದ್ದಾರೆ. ‘ಪ್ರಜಾವಾಣಿ’ಗೆ ಇದೇ ರೀತಿಯ ಹೈ ಕೋರ್ಟ್ ಆದೇಶ ಮಾಡಿದೆ ಎನ್ನಲಾದ ಎಂಟಕ್ಕೂ ಹೆಚ್ಚು ಆದೇಶ ಪ್ರತಿಗಳು ದೊರೆತ್ತಿವೆ. ಈ ಆದೇಶದ ಆಧಾರದಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಸರ್ವೆ ನಂಬರ್ ಖಾತೆಗಳು ಬದಲಾಗಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-15-239395210

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.