ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ):ತಾಲ್ಲೂಕಿನ ದೊಡ್ಡಬೆಳವಂಗಲ,ಚಿಕ್ಕಬೆಳವಂಗಲ, ರಾಂಪುರ, ಸೊಣ್ಣೇನಹಳ್ಳಿ, ನಾರಾನಹಳ್ಳಿ ಸುತ್ತಮುತ್ತ ಫಲವತ್ತಾದ 2,100 ಎಕರೆ ಕೃಷಿ ಜಮೀನು ಸ್ವಾಧೀನ ವಿರೋಧಿಸಿ ರೈತರು ಬುಧವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿಯಿಂದ 1,777 ಎಕರೆ ಕೃಷಿ ಜಮೀನು ಸ್ವಾಧೀನ ವಿರೋಧಿಸಿ ಮೂರು ವರ್ಷ ಹೋರಾಟ ನಡೆಸಿ ಗೆದ್ದ ಬಳಿಕ ಅಂತಹದ್ದೇ ಹೋರಾಟಕ್ಕೆ ಇಲ್ಲಿನ ರೈತರು ಅಣಿಯಾಗಿದ್ದು, ‘ಯಾವ ಕಾರಣಕ್ಕೂ ಕೆಐಎಡಿಬಿಗೆ ಒಂದಿಂಚು ಭೂಮಿ ಬಿಟ್ಟು ಕೊಡುವುದಿಲ್ಲ’ ಎಂದು ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.

ದೊಡ್ಡಬೆಳವಂಗಲದ ಹಳೆ ನಾಡ ಕಚೇರಿ ಆವರಣದಲ್ಲಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದ ಹೈಕೋರ್ಟ್ ಹಿರಿಯ ವಕೀಲ, ಸ್ವತಃ ರೈತರೂ ಆಗಿರುವ ಸಿ.ಎಚ್.ಹನುಮಂತರಾಯ, ‘ಅಭಿವೃದ್ಧಿಗೆ ನಾವು ವಿರೋಧಿಗಳಲ್ಲ. ಆದರೆ ಎಲ್ಲಾ ಜಮೀನುಗಳನ್ನು ತಾಲ್ಲೂಕಿನ ರೈತರಿಂದಲೇ ಕಸಿದುಕೊಂಡು ಇಲ್ಲಿನ ರೈತರು ಗುಳೆ ಹೋಗುವಂತೆ ಮಾಡುವ ಸರ್ಕಾರದ ಅವೈಜ್ಞಾನಿಕ ಕ್ರಮವನ್ನು ವಿರೋಧಿಸುತ್ತಿದ್ದೇವೆ’ ಎಂದು ಹೇಳಿದರು.

ಐದು ಸಾವಿರ ಎಕರೆ ಪ್ರದೇಶದಲ್ಲಿ ಕ್ವಿನ್ಸಿಟಿ ಅಭಿವೃದ್ಧಿಗೆ ಶೇಕಡ 80ರಷ್ಟು ಕೃಷಿ ಜಮೀನುಗಳನ್ನು ದೊಡ್ಡಬೆಳವಂಗಲ ಹೋಬಳಿಯಲ್ಲಿ ಸ್ವಾಧೀನಪಡಿಸಿ ಕೊಳ್ಳಲಾಗುತ್ತಿದೆ. ಇದಿಷ್ಟೇ ಸಾಲದೆಂಬಂತೆ ಈಗ ಅಡಿಕೆ, ತೆಂಗು ಇರುವ ಫಲವತ್ತಾದ 2,100 ಎಕರೆ ಜಮೀನನ್ನು ಇದೇ ಹೋಬಳಿಯಲ್ಲಿ ಸ್ವಾಧೀನಪಡಿಸಿ ಕೊಳ್ಳುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿ ಜಮೀನು ಉದ್ಯಮಿಗಳ ಪಾಲು: ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕನಿಷ್ಠ ನಿಯಮ ಪಾಲಿಸದೇ ಇಲ್ಲಿನ ಕೃಷಿ ಜಮೀನು ಉದ್ಯಮಿಗಳ ಪಾಲಾಗುವಂತೆ ಮಾಡುವ ಹುನ್ನಾರ ರೂಪಿಸಿದೆ. ಸ್ಥಳೀಯ ಜನ್ರತಿಧಿಗಳು ರೈತರ ಜಮೀನು ಉಳಿಸಲು ಎದೆಗಾರಿಕೆ ತೋರಬೇಕು. ಇದಕ್ಕೆ ಪೂರಕವಾಗಿ ಸ್ಥಳೀಯ ರೈತರು ಯಾವುದೇ ರೀತಿಯ ಗೊಂದಲಗಳಿಗೆ ಒಳಗಾಗದೇ ಜನ್ರತಿನಿಧಿಗಳಿಗೆ ಬೆಂಬಲವಾಗಿ ನಿಂತು ಧರಣಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

‘ನಮ್ಮ ಪೂರ್ವಜರ ಕಾಲದಿಂದಲೂ ಬೆಳೆ ಬೆಳೆಯುತ್ತ ಬಂದಿರುವ ಕೃಷಿ ಜಮೀನನ್ನು ಖಾಲಿ ಭೂಮಿ ಎಂದು ಕಂದಾಯ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇದರ ವಿರುದ್ಧ ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಲಾಗುವುದು. ರೈತರು ಆತಂಕ ಪಡದೆ ಒಗ್ಗಟ್ಟಿನಿಂದ ಮಾನಸಿಕವಾಗಿ ಹೋರಾಟಕ್ಕೆ ಸಜ್ಜಾಗಬೇಕು’ ಎಂದರು.

ಬುಧವಾರ ಸಂಜೆಯಿಂದ ಆರಂಭವಾಗಿರುವ ನಿರಂತರ ಧರಣಿ ಸತ್ಯಾಗ್ರಹದಲ್ಲಿ ವಕೀಲರಾದ ರುದ್ರಾರಾಧ್ಯ, ಕೇಶವಕುಮಾರ್, ಸ್ಥಳೀಯ ಮುಖಂಡರಾದ ಪ್ರಭಾ ಬೆಳವಂಗಲ, ಎಂ.ಗೋವಿಂದರಾಜು, ಆರ್. ಚಂದ್ರತೇಜಸ್ವಿ, ಸುನಿಲ್ಕುಮಾರ್, ತಿಮ್ಮೇಗೌಡ, ರಂಗನಾಥ್, ಸಿ.ಎಚ್.ರಾಮಕೃಷ್ಣಯ್ಯ, ವಿಜಯ್ ಕುಮಾರ್, ಡಿ.ಸಿ.ರಾಮೇಗೌಡ, ಡಿ.ಸಿ.ನಾಗರಾಜು, ಕಿಶೋರ್ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-4-311805365

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.