ದೊಡ್ಡಬೆಳವಂಗಲ(ದೊಡ್ಡಬಳ್ಳಾಪುರ):ದೊಡ್ಡಬೆಳವಂಗಲ ಸುತ್ತಮುತ್ತ 2,100 ಎಕರೆ ಭೂಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 30ನೇ ಪೂರೈಸಿದ್ದು, ಇದುವರೆಗೂ ಜಿಲ್ಲಾಡಳಿತ ಅಥವಾ ಸರ್ಕಾರದ ಇತರೆ ಯಾವುದೇ ಇಲಾಖೆಯಿಂದಲು ಸ್ಪಷ್ಟ ಭರವಸೆ ದೊರೆತಿಲ್ಲ.

ತಾಲ್ಲೂಕಿನ ದೊಡ್ಡಬೆಳವಂಗಲ,ಚಿಕ್ಕಬೆಳವಂಗಲ,ರಾಂಪುರ, ಸೊಣ್ಣೆನಹಳ್ಳಿ, ನಾರಾನಹಳ್ಳಿ ಸುತ್ತಮುತ್ತ ಫಲವತ್ತಾದ ಕೃಷಿಭೂಮಿ ಸ್ವಾಧೀನ ವಿರೋಧಿಸಿ ತಾಲ್ಲೂಕಿನ ದೊಡ್ಡಬೆಳವಂಗಲ ಹಳೆ ನಾಡಕಚೇರಿ ಮುಂದೆ ಧರಣಿ ಮುಂದುವರೆದಿದೆ.

ರೈತರು ಭೂಸ್ವಾಧೀನ ಕೈ ಬಿಡುವಂತೆ ದೊಡ್ಡಬೆಳವಂಗಲ ನಾಡ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ನಂತರ ದೊಡ್ಡಬೆಳವಂಗಲದಿಂದ ತಾಲ್ಲೂಕು ಕಚೇರಿವರೆಗೆ ನೂರಾರು ಜನ ಟ್ರ್ಯಾಕ್ಟರ್ ರ್ಯಾಲಿ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಈ ಎಲ್ಲಾ ಹೋರಾಟಗಳ ನಂತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ. ಭೂಸ್ವಾಧೀನಕ್ಕೆ ಒಳಗಾಗುತ್ತಿರುವ ಗ್ರಾಮಗಳ ರೈತರು ಪ್ರತಿ ದಿನವು ಎರಡು ಪಾಳಿಯಲ್ಲಿ ಧರಣಿಯಲ್ಲಿ ಭಾಗವಹಿಸುತ್ತಿದ್ದಾರೆ.

ಈಗಾಗಲೇ ಭೂಸ್ವಾಧಿನ ವಿರೋಧಿ ಸಮಿತಿಯಿಂದ ಜಮೀನು ಕಳೆದುಕೊಳ್ಳುತ್ತಿರುವ ಗ್ರಾಮಗಳಲ್ಲಿ ಜಾಗೃತಿ ಸಭೆ ನಡೆಸಲಾಗಿದೆ. ಈ ಮೂಲಕ ಭೂಸ್ವಾಧೀನವಾದರೆ ಇಡೀ ಗ್ರಾಮಗಳ ಜನರು ಉದ್ಯೋಗಗಳು ಇಲ್ಲದೆ ಗೂಳೆ ಹೋಗುವ ಸ್ಥಿತಿ ಬರುತ್ತದೆ ಎಂದು ಕರಪತ್ರವನ್ನು ಪ್ರತಿ ರೈತರ ಮನೆಗಳಿಗು ತಲುಪಿಸಿ ಗಟ್ಟಿಯಾದ ಹೋರಾಟಕ್ಕೆ ಸಜ್ಜಾಗುವಂತೆ ಕರೆ ನೀಡಲಾಗುತ್ತಿದೆ. ಇದಲ್ಲದೆ ಪ್ರತಿ ರೈತ ಕುಟುಂಬದ ವತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕವು ಭೂಸ್ವಾಧೀನ ಕೈ ಬಿಡುವಂತೆ ಕೋರಲಾಗುತ್ತಿದೆ.

ಧರಣಿಗೆ ವಿವಿಧ ಸಂಘಟನೆಗಳ ಬೆಂಬಲ: ಅನಿರ್ದಿಷ್ಟಾವಧಿ ಧರಣಿಗೆ ತಾಲ್ಲೂಕಿನ ವಿವಿಧ ರೈತ ಸಂಘಟನೆ, ಕನ್ನಡಪರ ಸಂಘಟನೆ ಸೇರಿದಂತೆ ಎಲ್ಲರು ಧರಣಿಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಮೇ 8 ರಂದು ನಗರದಲ್ಲಿ ನಡೆಯಲಿರುವ ಜೆಡಿಎಸ್ 25ರ ಸಂಭ್ರಮ ಕಾರ್ಯಕ್ರಮಕ್ಕೆ ಆಗಮಿಸುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಧರಣಿಗೆ ಬೆಂಬಲ ನೀಡುವಂತೆ ಹಾಗೂ ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಡುವಂತೆ ರೈತರು ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-15-541156114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.