ದೊಡ್ಡಬಳ್ಳಾಪುರ: ಸರ್ಕಾರ ವಿವಿಧ ಯೋಜನೆಗಾಗಿ ತಾಲ್ಲೂಕಿನಲ್ಲಿ ಭೂ ಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಿದೆ. ಇನ್ನೂ ಕೆಲವು ಯೊಜನೆ ರೂಪಿಸಿದೆ. ಇದರಿಂದ ಭೂ ಸ್ವಾಧೀನವೆಂದು ಕಬಂಧಬಾವಿನಲ್ಲಿ ಸಿಲುಕಿರುವ ಅನ್ನದಾತರು ತಮ್ಮ ಅಸ್ತಿತ್ವಕ್ಕಾಗಿ ಹೋರಾಟವನ್ನು ತೀವ್ರಗೊಳಿಸಿದ್ದಾರೆ.

ಇತ್ತೀಚಿನ ವರ್ಷದಲ್ಲಿ ತಾಲ್ಲೂಕಿನ ರೈತರು ವ್ಯವಸಾಯಕ್ಕಿಂತ ತಮ್ಮ ಫಲವತ್ತಾದ ಕೃಷಿ ಭೂಮಿ ಉಳಿವಿಗೆ ಹೋರಾಟ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ದೊಡ್ಡಬೆಳವಂಗಲ ಸುತ್ತಮುತ್ತ ಭೂ ಸ್ವಾಧೀನ ವಿರುದ್ಧ ಈಗಾಗಲೇ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದ್ದು, ವಿವಿಧ ಯೋಜನೆ ವಿರೋಧಿಸಿ ತಾಲ್ಲೂಕಿನ ಮೂರು ದಿಕ್ಕುಗಳಿಂದಲು ಹೋರಾಟ ರೂಪುಗೊಳ್ಳುತ್ತಿದೆ.

ಸಾಸಲು, ದೊಡ್ಡಬೆಳವಂಗಲದಲ್ಲಿ ಭೂ ಸ್ವಾಧೀನ ಹಾಗೂ ಬೆಂಗಳೂರಿನ ವೃಷಭಾವತಿಯ ಕೊಳಚೆ ನೀರು ಶುದ್ಧೀಕರಿಸಿ ತೂಬಗೆರೆ ಕೆರೆಗಳಿಗೆ ತುಂಬಿಸುವ ಯೋಜನೆ ವಿರುದ್ಧ ಅನ್ನದಾತರು ಸಿಡಿದಿದ್ದು , ಪ್ರತಿಭಟನೆಗಳನ್ನು ತೀವ್ರಗೊಳಿಸಿದ್ದಾರೆ.

ಇತ್ತೀಚಿಗೆ ಎತ್ತಿನಹೊಳೆ ನೀರು ಸಂಗ್ರಹಕ್ಕಾಗಿ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ವಿರುದ್ಧ ಲಕ್ಕೇನಹಳ್ಳಿ ಭಾಗದ ರೈತರು ಪ್ರತಿಭಟನೆ ನಡೆಸಿದ್ದರು.

ದೊಡ್ಡಬೆಳವಂಗಲ ಹೋಬಳಿ ಸರ್ಕಾರದ ಎರಡು ಯೋಜನೆಗಳಿಂದ ಈಗಾಗಲೇ ಅರ್ಧದಷ್ಟು ಕೃಷಿ ಭೂಮಿ ಸ್ವಾಧೀನಕ್ಕೆ ಒಳಪಟ್ಟಿದೆ. ಈಗ ಮೂರನೇ ಹಂತದಲ್ಲಿ ಡೇಟಾ ಸೆಂಟರ್ ಸ್ಥಾಪನೆಗಾಗಿ ಐದು ಗ್ರಾಮಗಳಲ್ಲಿ 2,100 ಎಕರೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಇದರ ವಿರುದ್ಧ ರೈತರು ಪ್ರತಿರೋಧಕ್ಕಾಗಿ ವಿವಿಧ ರೀತಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಸರ್ಕಾರಕ್ಕೆ ಸೂಕ್ತ ಸ್ಪಂದನೆ ದೊರೆಯದ ಕಾರಣ ದೊಡ್ಡಬೆಳವಂಗಲ ಹಳೆ ನಾಡಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದ್ದು, 53ನೇ ದಿನ ಪೂರೈಸಿದೆ.

ದೊಡ್ಡಬೆಳವಂಗಲ ಹೋಬಳಿಯಲ್ಲಿ 2021ರಲ್ಲಿ ಹೈಟೆಕ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆಗಾಗಿ ಸುಮಾರು 450 ಎಕರೆಯಷ್ಟು ಜಮೀನು ಸ್ವಾಧಿನಪಡಿಸಿಕೊಳ್ಳಲಾಯಿತು. ಎರಡನೇ ಹತಂದಲ್ಲಿ ಕ್ವಿನ್ ಸಿಟಿ ನಿರ್ಮಾಣಕ್ಕಾಗಿ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯಲ್ಲಿ 5,800 ಎಕರೆ ಭೂಸ್ವಾಧೀನ ಯೋಜನೆಯ ಭಾಗವಾಗಿ ಇಲ್ಲಿಯವರೆಗೆ ಸುಮಾರು 1,500 ಎಕರೆ ಭೂಸ್ವಾಧೀನ ನಡೆದಿದೆ.

ಮೂರನೇ ಹಂತದಲ್ಲಿ ಕ್ವಿನ್ಸಿಟಿ ಯೋಜನೆಗೆ ಹೊಂದಿಕೊಂಡಂತೆ ಇರುವ ಚಿಕ್ಕಬೆಳವಂಗಲ, ರಾಂಪುರ, ಸೊಣ್ಣೇನಹಳ್ಳಿ, ದೊಡ್ಡಬೆಳವಂಗಲ ಹಾಗೂ ನಾರನಹಳ್ಳಿ ಗ್ರಾಮಗಳ 2,100 ಎಕರೆ ಪ್ರದೇಶದಲ್ಲಿ ಡೇಟಾ ಸೆಂಟರ್ ಸ್ಥಾಪನೆಗಾಗಿ ಭೂಸ್ವಾಧೀನಕ್ಕೆ ಕೆಐಎಡಿಬಿ ಸಭೆ ನಡೆಸಿದ್ದು, ಅಧಿಸೂಚನೆಗೆ ಎಲ್ಲಾ ಸಿದ್ಧತೆ ನಡೆಸಿದೆ. ಕೊಳಚೆ ನೀರು ಬೇಡ

ಭೂಮಿ ಉಳಿವಿಗಾಗಿ ಹೋರಾಟ ನಿರಂತರ

ಫಲವತ್ತಾದ ಕೃಷಿ ಭೂಮಿ ಹೊಂದಿರುವ, ಅಡಿಕೆ, ತೆಂಗು, ಬಾಳೆ, ಹೂವು, ತರಕಾರಿಯನ್ನು ಸಮೃದ್ಧವಾಗಿ ಬೆಳೆಯುತ್ತಿರುವ ಭೂಮಿಯನ್ನು ಖಾಲಿ ಭೂಮಿ ಎಂದು ಕಂದಾಯ ಇಲಾಖೆ ಅಧಿಕಾರಿಗಳು ನೀಡಿರುವ ವರದಿ ಅತ್ಯಂತ ಅವೈಜ್ಞಾನಿಕ. ಪ್ರತಿ ವರ್ಷ ಮುಂಗಾರಿನಲ್ಲಿ ಸರ್ಕಾರವೇ ಬೆಳೆ ಸಮೀಕ್ಷೆ ನಡೆಸುತ್ತಿದೆ. ಈ ಸಮೀಕ್ಷೆಯ ಮಾಹಿತಿ ಪಹಣಿಗಳಲ್ಲಿ ಮುದ್ರಿತವಾಗುತ್ತದೆ. ಹೀಗಿದ್ದೂ ಸಹ ಸಮೃದ್ಧ ಬೆಳೆ ಇರುವ ಕೃಷಿ ಭೂಮಿಯನ್ನು ಖಾಲಿ ಎಂದು ವರದಿ ಸಿದ್ಧಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿರುವ ಹುನ್ನಾರದ ವಿರುದ್ಧ, ನಮ್ಮ ಹಿರಿಯರಿಂದ ಬಂದಿರುವ ಭೂಮಿ ಉಳಿವಿಗಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ.

-ಸುನಿಲ್ಕುಮಾರ್, ದೊಡ್ಡಬೆಳವಂಗಲ ರೈತ

ನೀರಿಲ್ಲದ ಯೋಜನೆಗೆ ನಮ್ಮ ಗ್ರಾಮಗಳು ಬಲಿ

ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು ನೀಡಿರುವ ವರದಿಯಲ್ಲೇ ಮಲೆನಾಡಿನ ಎತ್ತಿನಹೊಳೆಯಿಂದ ಬಯಲು ಸೀಮೆಗೆ ಸರಬರಾಜು ಮಾಡುವಷ್ಟು ನೀರಿನ ಲಭ್ಯತೆ ಇಲ್ಲ ಎಂದಿವೆ. ಹೀಗಿದ್ದು ಸಹ ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ರೈತರನ್ನು ಗ್ರಾಮಗಳಿಂದ ಒಕ್ಕಲೆಬ್ಬಿಸುವುದು ಖಂಡನೀಯ. ಇದರ ವಿರುದ್ಧ ಕಾನೂನು ಹಾಗೂ ಬೀದಿ ಹೋರಾಟ ಎರಡನ್ನು ನಡೆಸಲಾಗುತ್ತಿದೆ. ನೀರೆ ಇಲ್ಲದ ಯೋಜನೆಗಾಗಿ ನಮ್ಮ ಗ್ರಾಮಗಳು ಬಲಿಯಾಗಲು ಬಿಡುವುದಿಲ್ಲ.

-ಜಿ.ಶಾಲಿನಿ, ಶ್ರೀರಾಮನಹಳ್ಳಿ, ಸಾಸಲು ಹೋಬಳಿ

ನಮಗೆ ಬೇಕಿರುವುದು ಚೆಕ್ಡ್ಯಾಂ

ತೂಬಗೆರೆ ಹೋಬಳಿಯಲ್ಲಿ ನಂದಿಬೆಟ್ಟದ ಗಿರಿ ಶ್ರೇಣಿಯು ಸೇರಿದಂತೆ ಹತ್ತಾರು ಬೆಟ್ಟದ ಸಾಲುಗಳು ಇವೆ. ಈ ಭಾಗದ ಬೆಟ್ಟದ ತಪ್ಪಲಿನ ಹಳ್ಳಗಳಲ್ಲಿ ಕಿರು ಚೆಕ್ ಡ್ಯಾಂಗಳನ್ನು ನಿರ್ಮಿಸಿದರೆ ಅಂತರ್ಜಲ ಹೆಚ್ಚುವುದರ ಜೊತೆಗೆ ಕೆರೆಗಳಿಗು ನೀರು ಬರಲಿದೆ. ಹಾಗಾಗಿ ನಮ್ಮ ಹೋಬಳಿಯ ಯಾವುದೇ ಕೆರೆಗಳಿಗೂ ಬೆಂಗಳೂರಿನ ವೃಷಭಾವತಿಯ ಕೊಚ್ಚ ನೀರನ್ನು ಹರಿಸುವುದು ಬೇಡ. ವೃಷಭಾವತಿ ನೀರಿನಿಂದ ಅಂತರ್ಜಲ ಕಲುಷಿತವಾಗುವುದನ್ನು ತಪ್ಪಿಸಿ.

-ಹಳ್ಳಿರೈತ ಅಂಬರೀಶ್, ತೂಬಗೆರೆ

ಒಕ್ಕಲುತನಕ್ಕೆ ಕುತ್ತು

ದಶಕಗಳ ಹಿಂದೆ ಎತ್ತನಹೊಳೆ ಯೋಜನೆಯ ನೀರು ಸಂಗ್ರಹಗಾಗಿ ಅಣೆಕಟ್ಟೆ ನಿರ್ಮಿಸಲು ಸಾಸಲು ಹೋಬಳಿಯಲ್ಲಿ 12 ಗ್ರಾಮಗಳ ಸ್ಥಳಾಂತರ ಹಾಗೂ ಐದು ಸಾವಿರ ಎಕರೆ ಭೂಸ್ವಾಧೀನಕ್ಕೆ ನಿರ್ಧರಿಸಲಾಗಿತ್ತು. ವಿರೋಧದ ಬಳಿಕ ಐದು ಗ್ರಾಮಗಳ ಮುಳುಗಡೆ, 2,500 ಎಕರೆ ಭೂಸ್ವಾಧೀನಕ್ಕೆ ಬಂದು ನಿಂತಿದೆ.

ಎತ್ತಿನಹೊಳೆಯಿಂದ ಬರುವ ನೀರಿನ ಸಂಗ್ರಹಕ್ಕೆ ಪರ್ಯಾಯ ಮಾರ್ಗಗಳಿದ್ದು, ಗ್ರಾಮಗಳನ್ನು ಮುಳುಗಿಸಿ ಶತಮಾನಗಳಿಂದ ವಾಸವಾಗಿರುವ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವುದಕ್ಕೆ ರೈತರು ಮತ್ತು ಗ್ರಾಮಸ್ಥರು ಸುತಾರಾಂ ಒಪ್ಪುತ್ತಿಲ್ಲ. ಆದರೂ ಸರ್ಕಾರ ಈ ಯೋಜನೆಗೆ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದೆ. ಇದರ ವಿರುದ್ಧ ಪ್ರತಿಭಟನೆಯೊಂದಿಗೆ ಕಾನೂನು ಹೋರಾಟವು ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.