ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಕ್ಷೇತ್ರದ ಸಮೀಪದ ಬಂಡೇಪಾಳ್ಯ ಕೆಳಗಿನ ಜೂಗಾನಹಳ್ಳಿ ದೇವರ ಬೆಟ್ಟದ ವಿಶ್ವಶನೇಶ್ಚರ ಸ್ವಾಮಿ ದೇವಾಲಯದಲ್ಲಿ ಮೇ 16 ರಂದು ಶನೇಶ್ವರ ಜಯಂತಿ ನಡೆಯಲಿದೆ. ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಗೆ ಮಹಾಭಿಷೇಕ ಅಲಂಕಾರ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ.

ದೇವರ ಬೆಟ್ಟದ ವಿಶ್ವ ಶನೇಶ್ಚರಸ್ವಾಮಿಯ ರಥೋತ್ಸವ ಮೇ 17 ರಂದು ನಡೆಯಲಿದೆ. ಜಾತ್ರೆ ಅಂಗವಾಗಿ ಶನೇಶ್ಚರ ಸ್ವಾಮಿಗೆ ನಿತ್ಯ ಅಭಿಷೇಕ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಕಲ್ಯಾಣೋತ್ಸವ, ಶೇಷವಾಹನೋತ್ಸವ, ಪ್ರಾಕಾರೋತ್ಸವ ಹಾಗೂ ಮಧ್ಯಾಹ್ನ 12ಕ್ಕೆ ರಥೋತ್ಸವ ನಡೆಯಲಿದೆ. ಇದೇ ದಿನ ಸಂಜೆ ವಸಂತೋತ್ಸವ, ಉಯಲೋತ್ಸವ, ಶಯನೋತ್ಸವ ನಡೆಯಲಿವೆ ಎಂದು ದೇವಾಲಯದ ಧರ್ಮದರ್ಶಿ ಶ್ರೀಧರ್ಶರ್ಮ ತಿಳಿಸಿದ್ದಾರೆ.

ರಥಸಪ್ತಮಿ ಶನೇಶ್ವರಸ್ವಾಮಿ ದೇವಾಲಯ: ನಗರದ ಖಾಸ್ಬಾಗ್ ದರ್ಗಾಪುರದಲ್ಲಿನ ರಥಸಪ್ತಮಿ ಶನೇಶ್ವರಸ್ವಾಮಿ ದೇವಾಲಯದಲ್ಲಿ ಮೇ 16ರಂದು ಶನೇಶ್ವರ ಜಯಂತಿ ನಡೆಯಲಿದೆ.

ಬೆಳಗ್ಗೆ 5ರಿಂದ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ.ವಿವಿಧ ಭಜನಾ ತಂಡಗಳಿಂದ ಭಜನೆ, ಸಂಜೆ 7 ಗಂಟೆಗೆ ಶನೇಶ್ವರ ಉತ್ಸವ ಖಾಸ್ಬಾಗ್ ದರ್ಗಾಪುರ ಗ್ರಾಮದಲ್ಲಿ ಸಂಚರಿಸಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-15-1538793353

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.