ದೊಡ್ಡಬಳ್ಳಾಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲ್ಲೂಕಿನ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯ ದೇವಾಲಯದ ಆವರಣದಲ್ಲಿರುವ ಕಲ್ಯಾಣಿ ಸ್ವಚ್ಛತೆ ಹಾಗೂ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ ನೀಡಲಾಯಿತು.

ಘಾಟಿ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪಕ ಮಹಾಂತೇಶ್ ಚಾಲನೆ ನೀಡಿ, ದೇವಾಲಯದ ಕಲ್ಯಾಣಿ ಸ್ವಚ್ಛತಾ ಕಾರ್ಯ ಆರಂಭಿಸಿರುವುದು ಉತ್ತಮ ಕಾರ್ಯವಾಗಿದ್ದು, ನಮ್ಮ ಜಲ ಮೂಲಗಳು ಹಾಗೂ ಪವಿತ್ರ ಕಲ್ಯಾಣಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಸಂದೇಶ ಜನರಿಗೆ ಮುಟ್ಟಬೇಕಿದೆ ಎಂದರು.

ಕಲ್ಯಾಣಿಗೆ ಪೂಜಾ ವಿಧಿ ವಿಧಾನಗಳೊಂದಿಗೆ ದೇವಾಲಯದ ಅರ್ಚಕರಾದ ನವೀನ್ ಅವರು ಪೂಜೆ ಸಲ್ಲಿಸಿದರು. ತೂಬಗೆರೆಯ ಚಂದ್ರಶೇಖರ್ ಅವರಿಗೆ ಸ್ವಚ್ಛತೆ ಹಾಗೂ ಹೂಳು ತೆಗೆಯುವ ಕಾಮಗಾರಿಯ ಆದೇಶ ಪತ್ರ ಹಸ್ತಾಂತರ ಮಾಡಲಾಯಿತು.

ತಾಲ್ಲೂಕು ಯೋಜನಾಧಿಕಾರಿ ದಿನೇಶ್, ಘಾಟಿ ಪ್ರಾಧಿಕಾರ ಸದಸ್ಯ ಹೇಮಲತಾರಮೇಶ್, ಒಕ್ಕೂಟದ ಅಧ್ಯಕ್ಷ ಮುನಿರಾಜು, ಮುಖಂಡರಾದ ಪುರುಷೋತ್ತಮ್, ಒಕ್ಕೂಟದ ಪದಾಧಿಕಾರಿ ಚಂದ್ರಶೇಖರ್, ಶೈಲಜಾ,ದೇವಾಲಯ ಸಿಬ್ಬಂದಿ ಮಂಜುನಾಥ್, ಶಿವಪುರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ಕೃಷಿ ಮೇಲ್ವಿಚಾರಕ ನೋಡೆಲ್ ಅಧಿಕಾರಿ ಲೋಹಿತ್ಗೌಡ, ಕಚೇರಿ ಪ್ರಬಂಧಕ ಮಂಜುನಾಥ್, ಮೇಲ್ವಿಚಾರಕ ಶಬರೀಶ್, ಈರಣ್ಣ, ರಘು, ಬಸವರಾಜ್, ಆಡಿಟರ್ ನೇತ್ರಾವತಿ, ಶಿವಪುರ ಶೌರ್ಯ ತಂಡದ ಅಮರಾವತಿ, ಮಂಜುನಾಥ್, ಮಂಜುಳ ಸೇವಾಪ್ರತಿನಿಧಿ ರೂಪ, ಹೇಮಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-15-2125113806

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.