ದೊಡ್ಡಬಳ್ಳಾಪುರ: ‘ಜನರ ಮತ್ತು ಭೂಮಿಯ ಒಳಿತಿಗಾಗಿ: ಜೇನುನೊಣಗಳು ನಮ್ಮೆಲ್ಲರನ್ನು ಉಳಿಸಿ ಬೆಳೆಸುವ ಸಹಭಾಗಿತ್ವ’ ಎಂಬ ಧ್ಯೇಯ ವಾಕ್ಯದಡಿ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ, ಮೈತ್ರಿ ಸರ್ವ ಸಮಿತಿ ಸಹಯೋಗದಲ್ಲಿ ಹಾಡೋನಹಳ್ಳಿಯ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ವಿಶ್ವ ಜೇನುನೊಣಗಳ ದಿನ ಆಚರಿಸಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ಜೇನು ಕೃಷಿ ವಿಜ್ಞಾನಿ ಡಾ.ಜಿ. ಈಶ್ವರಪ್ಪ ‘ವಿಶ್ವ ಜೇನುನೊಣಗಳ ದಿನ’ ಆಚರಿಸುವ ಉದ್ದೇಶ ಹಾಗೂ ಮಹತ್ವ ವಿವರಿಸಿ, ಜೇನುನೊಣಗಳು ಉತ್ತಮ ಪರಾಗ ಸ್ಪರ್ಶ ಕೀಟಗಳಾಗಿದ್ದು, ಅನೇಕ ಆಹಾರ ಮತ್ತು ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತವೆ. ಜೇನು ಕುಟುಂಬಗಳನ್ನು ಕೀಟನಾಶಕ ಹಾಗೂ ರಾಸಾಯನಿಕ ವಸ್ತುಗಳ ಬಳಕೆಯಿಂದ ರಕ್ಷಣೆ ಮಾಡಿ ಜೇನು ಸಂತತಿಯನ್ನು ಪ್ರಕೃತಿಯಲ್ಲಿ ಹೆಚ್ಚಿಸಬೇಕು ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ. ಹನುಮಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೇನು ಕೃಷಿ ದಿನಾಚರಣೆಗೆ ಅಷ್ಟೇ ಸೀಮಿತವಾಗದೆ, ರೈತರು ಜೇನು ಕೃಷಿ ಅಳವಡಿಸಿಕೊಂಡು ತಮ್ಮ ಬೆಳೆಗಳ ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಜೇನು ಕೃಷಿ ಉದ್ದಿಮೆದಾರರಾಗಬೇಕು ಎಂದರು.

ಮೈತ್ರಿ ಸರ್ವ ಸೇವಾ ಸಮಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಹರೀಶ್ಬಾಬು ಪರಿಸರ, ಆಹಾರ ಉತ್ಪಾದನೆ, ಆರೋಗ್ಯ, ನೀರು ಮತ್ತು ಜೇನು ಕುಟುಂಬಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಜ್ಯೋತಿ ಮತ್ತು ಸಹಾಯಕ ಅಧಿಕಾರಿ ವೀರೇಶ್ ಅವರು ಇಲಾಖೆ ವತಿಯಿಂದ ಜೇನು ಕೃಷಿ ಅಭಿವೃದ್ಧಿಗೆ ರೈತರಿಗೆ ದೊರೆಯುವ ಸೌಲಭ್ಯ ಮತ್ತು ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿಪರ ಜೇನು ಕೃಷಿಕರಾದ ಮಧುರೆ ಗ್ರಾಮದ ಸಂತೋಷ್ಕುಮಾರ್, ಮಾಡೇಶ್ವರ ಗ್ರಾಮದ ಪವಿತ್ರ, ಯಾಕಾರ್ಲಹಳ್ಳಿಯ ಎಲ್.ರಾಜೇಶ್, ರಕ್ಕಿ ರಾಮನಹಳ್ಳಿ ಗ್ರಾಮದ ಆರ್.ವಿ.ಪ್ರಸನ್ನಕುಮಾರ್, ಶ್ರವಣೂರು ಗ್ರಾಮದ ಟಿ.ಆಕಾಶ್ ಮತ್ತು ಮಾದಗೊಂಡನಹಳ್ಳಿ ಗ್ರಾಮದ ಎಂ.ಸಿ.ಅಶ್ವತ್ಧನಾರಾಯಣ ಅವರನ್ನು ಸನ್ಮಾನಿಸಲಾಯಿತು.

ಜೇನು ಕೃಷಿ ಉದ್ದಿಮೆದಾರ ಸಂತೋಷ್ಕುಮಾರ್ ಅಭಿವೃದ್ಧಿಪಡಿಸಿದ ಜೇನು ತುಪ್ಪದ ತಪೋವನ ಮಧು ಬ್ರ್ಯಾಂಡ್ ಅನ್ನು ಅನಾವರಣ ಮಾಡಲಾಯಿತು.

ಸಂತೋಷ್ ಮಾತನಾಡಿ, ಕರ್ನಾಟಕದಲ್ಲಿ ಜೇನು ಕೃಷಿ ಕೈಗೊಳ್ಳಲು ಸೂಕ್ತ ವಾತಾವರಣದ ಜೊತೆಗೆ ಮಕರಂಧ ಮತ್ತು ಪರಾಗ ನೀಡುವ ಸಸ್ಯ ಸಂಪತ್ತು ಇರುವುದರಿಂದ ಯುವಕರು ಮುಂದೆ ಬಂದು ಜೇನು ಕೃಷಿಯಲ್ಲಿ ತೊಡಗಿ ಉದ್ದಿಮೆದಾರರಾಗಲು ವಿಫುಲ ಅವಕಾಶಗಳಿವೆ ಎಂದರು.

ಈ ಕಾರ್ಯಕ್ರಮದಲ್ಲಿ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ಜಿ.ಕೆ.ನಿಂಗರಾಜು,ಮಣ್ಣು ವಿಜ್ಞಾನಿ ಡಾ.ಬಾಲಾಜಿನಾಯ್ಕ, ಕೃಷಿ ವಿಸ್ತರಣಾ ವಿಜ್ಞಾನಿ ಡಾ.ವೈ.ಎಂ.ಗೋಪಾಲ್ ಗೃಹ ವಿಜ್ಞಾನಿ ಡಾ.ಸಿ.ಗೋಪಿಕಾ, ಮುತ್ತಗಿ, ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಸುಪ್ರಿಯಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-15-1634074494

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.