ಕನಸವಾಡಿ(ದೊಡ್ಡಬಳ್ಳಾಪುರ): ತಾಲ್ಲೂಕಿನ ಕನಸವಾಡಿಯಲ್ಲಿನ ಶನಿಮಹಾತ್ಮ ದೇವಾಲಯ ಸೇರಿದಂತೆ ಇತರೆಡೆಗಳಲ್ಲಿ ಶನಿವಾರ ಶನೇಶ್ವರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕನಸವಾಡಿಯ ದೇವಾಲಯದಲ್ಲಿ ಬೆಳಗ್ಗೆ 5ರಿಂದ ಪೂಜಾ ಕೈಂಕರ್ಯಗಳು ಜರುಗಿದವು. ನೂರಾರು ಭಕ್ತರು ಸಾಲುಗಟ್ಟಿ ನಿಂತು ಸ್ವಾಮಿಯ ದರ್ಶನ ಪಡೆದರು. ದೇವಾಲಯದ ಆವರಣದಲ್ಲಿರುವ ಜೇಷ್ಟಾದೇವಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮಗಳು ನಡೆದವು.

ದೇವರ ಬೆಟ್ಟ: ತಾಲ್ಲೂಕಿನ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮೀಪದ ಬಂಡೇಪಾಳ್ಯ ಕೆಳಗಿನ ಜೂಗಾನಹಳ್ಳಿ ದೇವರ ಬೆಟ್ಟದ ವಿಶ್ವ ಶನೇಶ್ಚರಸ್ವಾಮಿ ದೇವಾಲಯದಲ್ಲಿ ಜಯಂತಿ ನಡೆಯಿತು.

ಮೇ 17ರಂದು ನಡೆಯಲಿರುವ ರಥೋತ್ಸವ ಅಂಗವಾಗಿ ಅಂಕರಾರ್ಪಣೆ, ಕಳಸ ಸ್ಥಾಪನೆ, ಧ್ವಜಾರೋಹಣ ನಡೆಯಿತು. ಜಾತ್ರೆ ಅಂಗವಾಗಿ ಶನೇಶ್ಚರ ಸ್ವಾಮಿಗೆ ನಿತ್ಯ ಅಭಿಷೇಕ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 12ಕ್ಕೆ ರಥೋತ್ಸವ ನಡೆಯಲಿದೆ. ಇದೇ ದಿನ ಸಂಜೆ ವಸಂತೋತ್ಸವ, ಉಯಲೋತ್ಸವ, ಶಯನೋತ್ಸವ ಕಾರ್ಯಕ್ರಮಗಳು ಇರಲಿವೆ.

ರಥಸಪ್ತಮಿ ಶನೇಶ್ವರ ದೇವಾಲಯ: ದೊಡ್ಡಬಳ್ಳಾಪುರದ ಖಾಸ್ಬಾಗ್ ದರ್ಗಾಪುರದಲ್ಲಿನ ರಥಸಪ್ತಮಿ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯಗಳು ಜರುಗಿತು.

ವಿದ್ವಾನ್ ಎಚ್.ಗಂಗಾಧರಯ್ಯ ಅವರಿಂದ ಪ್ರವಚನ, ಪಂಚಮುಖಿ ಹನುಮಭಜನಾ ಮಂಡಳಿಯಿಂದ ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಪಾರಾಯಣ, ಕೃಷ್ನಮೂರ್ತಿ ತಂಡದಿಂದ ಭಜನಾ ಕಾರ್ಯಕ್ರಮಗಳು ನಡೆದವು.

ರಥಸಪ್ತಮಿ ಶನೇಶ್ವರಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಡಿ.ಎನ್.ದೊಡ್ಡನರಸಪ್ಪ, ಉಪಾಧ್ಯಕ್ಷ ಪೈಲ್ವಾನ್ ಶ್ರೀನಿವಾಸ್, ಪ್ರಧಾನ ಅರ್ಚಕ ಹಾಗೂ ಸಂಸ್ಥಾಪಕ ಎಂ.ಪುಟ್ಟಯ್ಯ, ಮುಖ್ಯ ಸಲಹೆಗಾರ ಎಂ.ಎಸ್.ಮಂಜುನಾಥ್, ಅರ್ಚಕ ಪು.ಮಹೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-15-1462629693

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.